ಮುಂಬೈ (ಮಹಾರಾಷ್ಟ್ರ): ಮುಂಬೈ ಡ್ರಗ್ಸ್ ಕೇಸ್ನಲ್ಲಿ ನಟಿ ಅನನ್ಯಾ ಪಾಂಡೆ ಎನ್ಸಿಬಿ ಅಧಿಕಾರಿಗಳ ಎದುರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೊಳಪಟ್ಟರು. ಈ ವೇಳೆ ಅನೇಕ ಮಾಹಿತಿ ಹಂಚಿಕೊಂಡಿರುವ ನಟಿ, ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಡ್ರಗ್ಸ್ ಪ್ರಕರಣ ಸಂಬಂಧ ಸತತ ಎರಡನೇ ದಿನವೂ ಬಾಲಿವುಡ್ ನಟಿ ಅನನ್ಯಾ ಪಾಂಡೆ, ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು. ವಿಚಾರಣೆ ವೇಳೆ ತಾವು ಆರ್ಯನ್ ಖಾನ್ ಜೊತೆ ಗಾಂಜಾ ವಿಚಾರವಾಗಿ ತಮಾಷೆ ಮಾಡುತ್ತಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ. ನಾನು ಡ್ರಗ್ಸ್ ಸೇವನೆ ಮಾಡಿಲ್ಲ ಜೊತೆಗೆ ಯಾರಿಗೂ ಕೂಡ ಸರಬರಾಜು ಮಾಡಿಲ್ಲ ಎಂದು ಅನನ್ಯಾ ಎನ್ಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿರುವ ಎನ್ಸಿಬಿ ಅಧಿಕಾರಿಗಳು, ನಿನ್ನೆ ಶಾರುಖ್ ಖಾನ್ರ ಮನ್ನತ್ ಹಾಗೂ ಬಾಲಿವುಡ್ ಖ್ಯಾತ ಹಿರಿಯ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ನಿವಾಸದ ಮೇಲೆ ದಾಳಿ ನಡೆಸಿದ್ದರು. ನಟಿಯ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಆರ್ಯನ್ ಬಾಲ್ಯದ ಗೆಳತಿ ಅನನ್ಯಾ.. ವಿದೇಶಗಳಲ್ಲಿ ಮೋಜು - ಮಸ್ತಿ, ಹತ್ತಾರು ಪಾರ್ಟಿಗಳಲ್ಲಿ ಕಾಣಿಸಿಕೊಂಡಿತ್ತು ಈ ಜೋಡಿ!