ಮುಂಬೈ:ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ದಕ್ಷಿಣ ಆಫ್ರಿಕಾಕ್ಕೆ ತೆರಳಲು ತಯಾರಿ ನಡೆಸಿದ್ದಾರೆ ಎಂದು ಎನ್ಸಿಬಿ ಹೇಳಿಕೊಂಡಿದೆ.
ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ನಟ ಅರ್ಜುನ್ ರಾಂಪಾಲ್ ತಯಾರಿ? - ಅರ್ಜುನ್ ರಾಂಪಾಲ್
ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿರುವ ನಟ ಅರ್ಜುನ್ ರಾಂಪಾಲ್ ಇದೀಗ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ತಯಾರಿ ನಡೆಸಿದ್ದಾರೆಂದು ಎನ್ಸಿಬಿ ಆರೋಪಿಸಿದೆ.
ಈಗಾಗಲೇ ಎನ್ಸಿಬಿಯಿಂದ ಎರಡು ಸಲ ವಿಚಾರಣೆಗೊಳಪಟ್ಟಿರುವ ನಟ ರಾಂಪಾಲ್ಗೆ ಕ್ಲೀನ್ ಚಿಟ್ ನೀಡಿಲ್ಲ. ಬದಲಾಗಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಇದೀಗ ಅವರು ದಕ್ಷಿಣ ಆಫ್ರಿಕಾಗೆ ಪಲಾಯನ ಮಾಡುವ ತಯಾರಿಯಲ್ಲಿದ್ದಾರೆ ಎಂದು ಅಲ್ಲಿನ ರಾಯಭಾರಿ ಕಚೇರಿಗೆ ಪತ್ರ ಬರೆದು ಮಾಹಿತಿ ತಿಳಿಸಿದೆ.
ನ್ಯಾಯಾಲಯದಲ್ಲಿ 50 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಇದರಲ್ಲಿ ಸುಶಾಂತ್ ಸಿಂಗ್ ಗೆಳತಿ ರಿಯಾ ಕೂಡ ಸೇರಿದ್ದಾರೆ. ಬಾಲಿವುಡ್ನಲ್ಲಿ ಅಪಾರ ಪ್ರಮಾಣದಲ್ಲಿ ಡ್ರಗ್ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ನಟ ರಾಂಪಾಲ್ ಅವರ ಮುಂಬೈ ನಿವಾಸ ಹಾಗೂ ಕಚೇರಿ ಮೇಲೆ ಎನ್ಸಿಬಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಾದ ಲ್ಯಾಪ್ ಟಾಪ್, ಮೊಬೈಲ್ ಫೋನ್, ಟ್ಯಾಬ್ಲೆಟ್ಸ್ ವಶಪಡಿಸಿಕೊಂಡಿದ್ದರು.