ಕರ್ನಾಟಕ

karnataka

ETV Bharat / sitara

ಇಂದು ಎನ್​​ಸಿಬಿ ವಿಚಾರಣೆ ಎದುರಿಸಲಿರುವ ದೀಪಿಕಾ ಪಡುಕೋಣೆ - ಸಾರಾ ಅಲಿಖಾನ್ ಎನ್​​​ಸಿಬಿ ವಿಚಾರಣೆ

ಪತಿ ರಣವೀರ್ ಸಿಂಗ್ ಜೊತೆ ಗೋವಾಗೆ ತೆರಳಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿನ್ನೆ ಮುಂಬೈಗೆ ವಾಪಸಾಗಿದ್ದು ಇಂದು ಎನ್​​​ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​ಸಿಬಿ ಅಧಿಕಾರಿಗಳು ದೀಪಿಕಾಗೆ ನೋಟೀಸ್ ಜಾರಿ ಮಾಡಿದ್ದರು.

Deepika Padukone
ದೀಪಿಕಾ ಪಡುಕೋಣೆ

By

Published : Sep 26, 2020, 10:25 AM IST

Updated : Sep 26, 2020, 12:09 PM IST

ಬಾಲಿವುಡ್ ಡ್ರಗ್ಸ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಇಂದು ಎನ್​ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಡ್ರಗ್ಸ್​​​​ಗೆ ಸಂಬಂಧಿಸಿದಂತೆ ತಮ್ಮ ಮ್ಯಾನೇಜರ್ ಜೊತೆಗೆ ದೀಪಿಕಾ ಚಾಟಿಂಗ್​ ಮಾಡಿದ್ದರ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ಅಧಿಕಾರಿಗಳು ದೀಪಿಕಾಗೆ ನೋಟೀಸ್ ನೀಡಿದ್ದರು.

ದೀಪಿಕಾ ಪಡುಕೋಣೆ

ಪತಿ ರಣವೀರ್ ಸಿಂಗ್​ ಜೊತೆ ಗೋವಾಗೆ ತೆರಳಿದ್ದ ದೀಪಿಕಾ ನಿನ್ನೆ ಮುಂಬೈಗೆ ವಾಪಸಾಗಿದ್ದಾರೆ. ದೀಪಿಕಾ ಜೊತೆಗೆ ಸಾರಾ ಅಲಿಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಿಮೊನ್ ಖಂಬಟ್ಟಾ, ಸೆಲಬ್ರಿಟಿ ಮ್ಯಾನೇಜರ್ ಶ್ರುತಿ ಮೋದಿಗೆ ಕೂಡಾ ಎನ್​ಸಿಬಿ ಸಮನ್ಸ್ ಜಾರಿ ಮಾಡಿತ್ತು. ಫ್ಯಾಷನ್ ಡಿಸೈನರ್ ಸಿಮೊನ್ ಖಂಬಟ್ಟಾ ಗುರುವಾರ ಮುಂಬೈನಲ್ಲಿ ವಿಚಾರಣೆ ಎದುರಿಸಿದ್ದಾರೆ. ಕ್ವಾನ್ ಸಿಇಒ ಧ್ರುವ ಚಿತ್ಗೋಪೇಕರ್ ಹಾಗೂ ನಿರ್ಮಾಪಕ ಮಧು ಮಂತೇನ ಕೂಡಾ ವಿಚಾರಣೆಗೆ ಹಾಜರಾಗಿದ್ದರು. ಇವರೆಲ್ಲರೊಂದಿಗೆ ಸೆಲಬ್ರಿಟಿ ಮ್ಯಾನೇಜರ್ ಶ್ರುತಿ ಮೋದಿ ಹಾಗೂ ಸುಶಾಂತ್ ಮಾಜಿ ಬ್ಯುಸ್ನೆಸ್​ ಮ್ಯಾನೇಜರನ್ನು ಕೂಡಾ ಎನ್​ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಗೋವಾದಿಂದ ಮುಂಬೈಗೆ ಬಂದ ದೀಪಿಕಾ

ಡ್ರಗ್ಸ್ ಸೇವನೆ, ಸಂಗ್ರಹ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ಸೆಲಬ್ರಿಟಿಗಳು ಮೊಬೈಲ್​​ ಚಾಟ್​​​​ ನಡೆಸಿದ್ದಾರೆ ಎಂದು ತಿಳಿದ ನಂತರ ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಎನ್​ಸಿಬಿ ತನಿಖೆ ಆರಂಭಿಸಿತ್ತು. ಸುಶಾಂತ್ ತಂದೆ ಕೆ.ಕೆ. ಸಿಂಗ್ ಜುಲೈ 28 ರಂದು ರಿಯಾ ಚಕ್ರವರ್ತಿ ಮೇಲೆ ಎಫ್​​ಐಆರ್ ದಾಖಲಿಸಿದ್ದರು. ನಂತರ ಜುಲೈ 31 ರಂದು ಜಾರಿ ನಿರ್ದೇಶನಾಲಯವು ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜಾರಿ ಪ್ರಕರಣ ಮಾಹಿತಿ ವರದಿಯನ್ನು ದಾಖಲಿಸಿತ್ತು. ಇಂದು ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ಕೂಡಾ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

Last Updated : Sep 26, 2020, 12:09 PM IST

ABOUT THE AUTHOR

...view details