ಕರ್ನಾಟಕ

karnataka

ETV Bharat / sitara

ಗಣರಾಜ್ಯೋತ್ಸವದಂದು ತೆರೆ ಕಾಣಲು ಸಜ್ಜಾಗಿದೆ 'ಶೆಹಜಾದ್​' - ಶೆಹಜಾದ್ ಚಿತ್ರ ಬಿಡುಗಡೆ

ಅಲ್ಲು ಅರ್ಜುನ್​ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ಹಿಂದಿ ಭಾಷೆಯಲ್ಲಿ ರಿಮೇಕ್​ ಆಗಿ, ಗಣರಾಜ್ಯೋತ್ಸವಕ್ಕೆ ತೆರೆ ಕಾಣಲು ಸಜ್ಜಾಗಿದೆ..

Does Ala Vaikunthapurramuloo Hindi release spell trouble for Kartik Aaryan's Shehzada?
ಗಣರಾಜ್ಯೋತ್ಸವದಂದು ತೆರೆ ಕಾಣಲು ಸಜ್ಜಾಗಿದೆ 'ಶೆಹಜಾದ್​'

By

Published : Jan 19, 2022, 12:38 PM IST

ಹೈದರಾಬಾದ್(ತೆಲಂಗಾಣ) :ಪುಷ್ಪ ಸಿನಿಮಾ ರಿಲೀಸ್​ ಆಗಿ ಸಿನಿಮಾ ಥಿಯೇಟರ್​ಗಳಲ್ಲಿ ಧೂಳೆಬ್ಬಿಸುತ್ತಿದೆ. ಇದ್ರ ಬೆನ್ನಲ್ಲೇ ಅಲ್ಲು ಅರ್ಜುನ್​ ನಟನೆಯ ‘ಅಲ ವೈಕುಂಠಪುರಮುಲೋ’ ಸಿನಿಮಾ ಹಿಂದಿ ಭಾಷೆಯಲ್ಲಿ ರಿಮೇಕ್​ ಆಗಿ, ಗಣರಾಜ್ಯೋತ್ಸವಕ್ಕೆ ತೆರೆ ಕಾಣಲು ಸಜ್ಜಾಗಿದೆ. ಈ ಹಿನ್ನೆಲೆ ಬಾಕ್ಸ್​ ಆಫೀಸ್​ನಲ್ಲಿ ಸಿನಿಮಾಗಳು ಕ್ಲ್ಯಾಶ್ ಆಗುವ ಸಾಧ್ಯತೆಗಳಿವೆ.

ಅಲಾ ವೈಕುಂಠಪುರಮುಲು ಹಿಂದಿ ರಿಮೇಕ್ ನಿರ್ಮಾಣ ಹಂತದಲ್ಲಿದೆ. ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಈಗಾಗಲೇ ಬಹು ನಿರೀಕ್ಷಿತ ಚಿತ್ರಗಳು ಸದ್ದು ಮಾಡುತ್ತಿವೆ. ಇದ್ರ ನಡುವೆ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಅಲಾ ವೈಕುಂಠಪುರಮುಲು ಹಿಂದಿ ವರ್ಷನ್​​ 'ಶೆಹಜಾದ್​' ​ ಸಜ್ಜಾಗಿದೆ.

ಇದನ್ನೂ ಓದಿ:ಸಹೋದರಿಯ ಗೆಳೆಯ ಆಕಾಶ್ ಮೆಹ್ತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಟಿ ಜಾಹ್ನವಿ ಕಪೂರ್​

ನಿರ್ದೇಶಕ ರೋಹಿತ್ ಧವನ್‌ ಅವರ ಶೆಹಜಾದ್​ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯಿಸಿದ್ದಾರೆ. ಭೂಷಣ್ ಕುಮಾರ್, ಅಲ್ಲು ಅರವಿಂದ್ ಮತ್ತು ಅಮನ್ ಗಿಲ್ ನಿರ್ಮಾಣದ ಈ ಚಿತ್ರ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.

ABOUT THE AUTHOR

...view details