ಮುಂಬೈ: ನಟಿ, ನಿರ್ಮಾಪಕಿ, ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ ಅವರು ನಿಮಜ್ಜನಕ್ಕೂ ಮುನ್ನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಣಪತಿ ಪೂಜೆಯಲ್ಲಿ ದಿವ್ಯಾ ಖೋಸ್ಲಾ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ನಂತರ ಟಿ-ಸಿರೀಸ್ ಕಚೇರಿಯಲ್ಲಿ ಗಣೇಶ ಮೂರ್ತಿ ನಿಮಜ್ಜನ ಮಾಡಲಾಯಿತು.
watch video: ನಿಮಜ್ಜನಕ್ಕೂ ಮುನ್ನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಖ್ಯಾತ ನಟಿ! - ಗಣಪತಿಗೆ ವಿಶೇಷ ಪೂಜೆ
ನಟಿ ದಿವ್ಯಾ ಖೋಸ್ಲಾ ಕುಮಾರ್ ಅವರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ವಿಡಿಯೋ ಇಲ್ಲಿದೆ ನೋಡಿ.
![watch video: ನಿಮಜ್ಜನಕ್ಕೂ ಮುನ್ನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಖ್ಯಾತ ನಟಿ! Divya Khosla](https://etvbharatimages.akamaized.net/etvbharat/prod-images/768-512-13113501-thumbnail-3x2-lek.jpg)
ದಿವ್ಯಾ ಖೋಸ್ಲಾ
ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ದಿವ್ಯಾ ಖೋಸ್ಲಾ
ದಿವ್ಯಾ ಖೋಸ್ಲಾ ಕುಮಾರ್ ಅವರು ಹಿಂದಿ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನೇಕ ಜಾಹೀರಾತುಗಳಲ್ಲಿ ಸಹ ಕೆಲಸ ಮಾಡಿದ್ದು, ಆಲ್ಬಂ ಹಾಡುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಟಿ-ಸಿರೀಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಭೂಷಣ್ ಕುಮಾರ್ ಅವರನ್ನು ಮದುವೆಯಾಗಿರುವ ದಿವ್ಯಾ, 18ನೇ ವಯಸ್ಸಿಗೆ ಮಾಡೆಲಿಂಗ್ ಆರಂಭಿಸಿದ್ದರು.