ಮುಂಬೈ: ಕೊರೊನಾ ಸಾಂಕ್ರಾಮಿಕ ರೋಗದಿಂದ ವಂಚಿತ ಕುಟುಂಬಗಳಿಗೆ ಸಹಾಯ ಮಾಡುವ ತಮ್ಮ ಮಾನವೀಯ ಕಾರ್ಯವನ್ನು ಬಾಲಿವುಡ್ ನಟ ಸೋನು ಸೂದ್ ಮುಂದುವರೆಸಿದ್ದಾರೆ.
ನಿವಾಸದ ಬಳಿ ಸಹಾಯ ಕೋರಿ ಬಂದ ಜನರನ್ನು ಸಂತೈಸಿದ ಸೋನು ಸೂದ್ - ಸೋನು ಸೂದ್ ನಿವಾಸದ ಬಳಿ ಸಹಾಯ ಕೋರಿ ಬಂದ ಜನ
ತೆರೆ ಮೇಲೆ ಅತಿ ಹೆಚ್ಚು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಸೋನು ಸೂದ್, ಇದೀಗ ರಿಯಲ್ ಲೈಫ್ ಹೀರೋ ಆಗಿದ್ದಾರೆ. ಕಷ್ಟವೆಂದು ಬಂದವರಿಗೆ ಸಹಾಯ ಹಸ್ತ ಚಾಚುವ ಸೂದ್ ತೊಂದರೆಯಲ್ಲಿರುವವರ ಪಾಲಿಗೆ ಬೆಳಕಾಗುತ್ತಿದ್ದಾರೆ.
ನಿವಾಸದ ಬಳಿ ಸಹಾಯ ಕೋರಿ ಬಂದ ಜನರನ್ನು ಭೇಟಿಯಾದ ಸೋನು ಸೂದ್
ಭಾನುವಾರ ತಮ್ಮ ಮನೆಯ ಹೊರಗೆ ಸಹಾಯ ಕೋರಿ ಬಂದ ಜನರನ್ನು ಸೋನು ಭೇಟಿಯಾದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದರು.
ವಲಸಿಗರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವುದರಿಂದ ಹಿಡಿದು ರೋಗಿಗಳಿಗೆ ಔಷಧಿಗಳು ಮತ್ತು ಇತರ ಕೊರೊನಾ ಪರಿಹಾರ ಸಂಪನ್ಮೂಲಗಳನ್ನು ವ್ಯವಸ್ಥೆ ಮಾಡಿದ ಕೀರ್ತಿ ಸೋನು ಸೂದ್ಗೆ ಸಲ್ಲುತ್ತದೆ.