ಕರ್ನಾಟಕ

karnataka

ETV Bharat / sitara

ಟೈಗರ್​ ಶ್ರಾಫ್​ ತಂಗಿ ಬರ್ತ್​ಡೇಗೆ ಹೀಗಿತ್ತು ದಿಶಾ ಪಟಾನಿ ವಿಶ್​..

ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣಾ ಶ್ರಾಫ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕೃಷ್ಣಾ ಜೊತೆಗೆ ಜಿಮ್​ನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋ ತುಣುಕನ್ನು ದಿಶಾ ಪಟಾನಿ ಹಂಚಿಕೊಂಡು ವಿಶ್​ ಮಾಡಿದ್ದಾರೆ.

Disha Patani wishes krishna shroff
ಟೈಗರ್​ ಶ್ರಾಫ್​ ತಂಗಿ ಬರ್ತ್​ಡೇಗೆ ಹೀಗಿತ್ತು ದಿಶಾ ಪಟಾನಿ ವಿಶ್

By

Published : Jan 21, 2022, 1:47 PM IST

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟ- ನಟಿಯರಾಗಿದ್ದು, ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕಳೆದ ಕೆಲ ವರ್ಷಗಳಿಂದ ಹರಡಿದೆ. ಇದಕ್ಕೆ ಸಾಕ್ಷಿಯಾಗಿ ಟೈಗರ್ ಮತ್ತು ದಿಶಾ ಆಗಾಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ದಿಶಾ ಪಟಾನಿ ಇನ್​​ಸ್ಟಾಗ್ರಾಮ್ ಸ್ಟೋರಿ

ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣಾ ಶ್ರಾಫ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕೃಷ್ಣಾ ಜೊತೆಗೆ ಜಿಮ್​ನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋ ತುಣುಕು ಹಂಚಿಕೊಂಡು ದಿಶಾ ಪಟಾನಿ ಕೂಡ ಶುಭಕೋರಿದ್ದಾರೆ. ದಿಶಾ ಹಾಗೂ ಕೃಷ್ಣಾ ಒಳ್ಳೆಯ ಸ್ನೇಹಿತರೂ ಹೌದು.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ಯಾರ್ರೀ ಅವರಿಬ್ಬರ ವಿಚ್ಛೇದನದ ಬಗ್ಗೆ ಮಾತನಾಡೋಕೆ?.. ಆರ್​ಜಿವಿ ಕಮೆಂಟ್​ ಬಗ್ಗೆ ಉರ್ಫಿ ಕೆಂಡಾಮಂಡಲ!

ಕೃಷ್ಣಾ ಶ್ರಾಫ್ ಅವರು ಇತ್ತೀಚೆಗಷ್ಟೇ ಬಿಡುಗಡೆಯಾದ 'ಕಿನ್ನಿ ಕಿನ್ನಿ ವಾರಿ' ಎಂಬ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಜನ್ಮದಿನ ಆಚರಿಸಿದ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದಾರೆ.

ಇನ್ನು ಟೈಗರ್ ಶ್ರಾಫ್ ತಮ್ಮ ಮುಂದಿನ 'ಗಣಪತ್​' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ಆಗಾಗ ಹಾಟ್​ ಫೋಟೋಗಳನ್ನು ಶೇರ್​ ಮಾಡಿ ಪಡ್ಡೆ ಹುಡುಗರ ಮನ ಕದಿಯುವ ಚೆಲುವೆ ದಿಶಾ ಪಟಾನಿ 'ಏಕ್​ ವಿಲನ್​ ರಿಟರ್ನ್ಸ್​' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details