ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ 'ಭಾರತ್' ಚಿತ್ರದಲ್ಲಿ ನಟಿಸಿದ್ದ ದಿಶಾ ಪಠಾನಿಗೆ ಇಷ್ಟು ಬೇಗ ಮತ್ತೆ ಸಲ್ಮಾನ್ ಜೊತೆ ನಟಿಸುವ ಅವಕಾಶ ದೊರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಲ್ಮಾನ್ ಹೊಸ ಚಿತ್ರ 'ರಾಧೆ' ಯಲ್ಲಿ ದಿಶಾ ನಟಿಸುತ್ತಿದ್ದಾರೆ.
ಮತ್ತೆ ಸಲ್ಲು ಜೊತೆ ನಟಿಸುತ್ತಿರುವ ದಿಶಾ ಪಠಾನಿ...'ರಾಧೆ' ಜೊತೆಯಾದ ಬಾಘಿ ಹುಡುಗಿ - ಮತ್ತೆ ಸಲ್ಮಾನ್ ಖಾನ್ ಜೊತೆ ದಿಶಾ ಪಠಾನಿ
'ಭಾರತ್'ನಲ್ಲಿ ಸಲ್ಮಾನ್ ಸರ್ ಜೊತೆ ನಟಿಸಲು ಅವಕಾಶ ದೊರೆತಾಗ ಬಹಳ ಸಂತೋಷವಾಗಿತ್ತು. ಆದರೆ ಮತ್ತೆ 'ರಾಧೆ' ಚಿತ್ರಕ್ಕಾಗಿ ಬುಲಾವ್ ಬಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. 'ರಾಧೆ' ಚಿತ್ರದ ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಗಿದೆ ಎನ್ನುತ್ತಾರೆ ದಿಶಾ ಪಠಾನಿ.
'ಬಹಳ ವರ್ಷಗಳಿಂದ ಸಲ್ಮಾನ್ ಖಾನ್ ಸರ್ ಬಾಲಿವುಡ್ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. 'ಭಾರತ್' ನಂತರ ಮತ್ತೆ ಅವರೊಂದಿಗೆ ನಟಿಸಲು ಇಷ್ಟು ಬೇಗ ಅವಕಾಶ ದೊರೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. 'ಭಾರತ್'ನಲ್ಲಿ ಸಲ್ಮಾನ್ ಸರ್ ಜೊತೆ ನಟಿಸಲು ಅವಕಾಶ ದೊರೆತಾಗ ಬಹಳ ಸಂತೋಷವಾಗಿತ್ತು. ಆದರೆ ಮತ್ತೆ 'ರಾಧೆ' ಚಿತ್ರಕ್ಕಾಗಿ ಬುಲಾವ್ ಬಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. 'ರಾಧೆ' ಚಿತ್ರದ ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಗಿದೆ ಎನ್ನುತ್ತಾರೆ ದಿಶಾ ಪಠಾನಿ. ಕುಂಗ್ ಫು ಯೋಗ, ಬಾಘಿ 2 , ಭಾರತ್ ಸಿನಿಮಾಗಳಲ್ಲಿ ದಿಶಾ ಸ್ಟಂಟ್ಗಳನ್ನು ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾಗಳೆಂದರೆ ದಿಶಾಗೆ ಬಹಳ ಇಷ್ಟವಂತೆ. 'ರಾಧೆ' ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು ಸೋಹೆಲ್ ಖಾನ್, ಅತುಲ್ ಅಗ್ನಿಹೋತ್ರಿ, ಸಲ್ಮಾನ್ ಖಾನ್ ಮೂವರೂ ಬಂಡವಾಳ ಹೂಡಿದ್ದಾರೆ.
ಇನ್ನು ದಿಶಾ ಅಭಿನಯದ 'ಮಲಾಂಗ್' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಕುನಾಲ್ ಖೆಮು ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಮಲಾಂಗ್' ನಲ್ಲಿ ಕೂಡಾ ನನಗೆ ಸ್ಟಂಟ್ ಮಾಡಲು ಅವಕಾಶ ದೊರೆತಿದೆ ಎನ್ನುತ್ತಾರೆ ದಿಶಾ. ನಾನು ಚಿಕ್ಕಂದಿನಿಂದ ಹಾರರ್ ಹಾಗೂ ಆ್ಯಕ್ಷನ್ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಅದರಲ್ಲೂ ಯುವತಿಯರಿಗೆ ಕೀಟಲೆ ಮಾಡುವ ಹುಡುಗರಿಗೆ ಹೊಡೆಯುವ ದೃಶ್ಯಗಳೆಂದರೆ ನನಗೆ ಬಹಳ ಇಷ್ಟ ಎನ್ನುತ್ತಾರೆ ದಿಶಾ. ಮೋಹಿತ್ ಸೂರಿ ನಿರ್ದೇಶನದ ಈ ಸಿನಿಮಾ ಫೆಬ್ರವರಿ 17 ರಂದು ಬಿಡುಗಡೆಯಾಗುತ್ತಿದೆ.