ಹೈದರಾಬಾದ್ :ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮಿಳು ಸೂಪರ್ಹಿಟ್ ಸಿನಿಮಾ ವಿಕ್ರಮ್ ವೇದದ ಹಿಂದಿ ರಿಮೇಕ್ಗಾಗಿ ಸೈಫ್ ಅಲಿ ಖಾನ್ ಅವರೊಂದಿಗೆ ಮತ್ತೆ ಒಂದಾಗಲು ಸಜ್ಜಾಗಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಯೋಜನೆಯಿಂದ ಹೊರ ನಡೆದಿದ್ದಾರೆ.
ವಿಕ್ರಂ ವೇದ ರಿಮೇಕ್‌ನಿಂದ ಅಮೀರ್ ಖಾನ್ ಹಿಂದೆ ಸರಿದಿದ್ದಕ್ಕೆ ಕಾರಣವೇನು? - ವಿಜಯ್ ಸೇತುಪತಿ ಹಾಗೂ ಅಮೀರ್ ಖಾನ್ ಸಮಧಾನ
ತಮಿಳಿನಲ್ಲಿ ವಿಜಯ್ ಸೇತುಪತಿ ನಿಭಾಯಿಸಿದ ಪಾತ್ರವನ್ನು ಹಿಂದಿಯಲ್ಲಿ ಅಮೀರ್ ಖಾನ್ ನಿರ್ವಹಿಸಬೇಕಿತ್ತು. ಆದರೆ, ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸಂದರ್ಭದಲ್ಲಿ ವಿಜಯ್ ಸೇತುಪತಿ ಜೊತೆ ಮನಸ್ತಾಪ ಉಂಟಾಗಿತ್ತು. ಅಮೀರ್, ವಿಜಯ್ ಸೇತುಪತಿ ನಿಭಾಯಿಸಿದ ಪಾತ್ರವನ್ನು ನಿರ್ವಹಿಸಲು ಇದುವೇ ಕಾರಣ ಎಂದು ತಿಳಿದು ಬಂದಿದೆ..
![ವಿಕ್ರಂ ವೇದ ರಿಮೇಕ್‌ನಿಂದ ಅಮೀರ್ ಖಾನ್ ಹಿಂದೆ ಸರಿದಿದ್ದಕ್ಕೆ ಕಾರಣವೇನು? amir vijay](https://etvbharatimages.akamaized.net/etvbharat/prod-images/768-512-10175066-253-10175066-1610168288115.jpg)
amir vijay
ಸ್ಕ್ರಿಪ್ಟ್‌ನಲ್ಲಿ ತೃಪ್ತರಾಗದ ಕಾರಣ ಅವರು ಈ ಯೋಜನೆ ತೊರೆದರು ಎಂದು ಮೊದಲಿಗೆ ಭಾವಿಸಲಾಗಿತ್ತು. ಆದರೆ, ವಿಜಯ್ ಸೇತುಪತಿಯೊಂದಿಗೆ ಅಮೀರ್ ಖಾನ್ ಅಸಮಾಧಾನವೇ ಅವರು ಚಿತ್ರದಿಂದ ನಿರ್ಗಮಿಸಲು ಮುಖ್ಯ ಕಾರಣ ಎಂದು ಇತ್ತೀಚೆಗೆ ತಿಳಿದು ಬಂದಿದೆ.
ತಮಿಳಿನಲ್ಲಿ ವಿಜಯ್ ಸೇತುಪತಿ ನಿಭಾಯಿಸಿದ ಪಾತ್ರವನ್ನು ಹಿಂದಿಯಲ್ಲಿ ಅಮೀರ್ ಖಾನ್ ನಿರ್ವಹಿಸಬೇಕಿತ್ತು. ಆದರೆ, ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸಂದರ್ಭದಲ್ಲಿ ವಿಜಯ್ ಸೇತುಪತಿ ಜೊತೆ ಮನಸ್ತಾಪ ಉಂಟಾಗಿತ್ತು. ಅಮೀರ್, ವಿಜಯ್ ಸೇತುಪತಿ ನಿಭಾಯಿಸಿದ ಪಾತ್ರವನ್ನು ನಿರ್ವಹಿಸಲು ಇದುವೇ ಕಾರಣ ಎಂದು ತಿಳಿದು ಬಂದಿದೆ.