ಕರ್ನಾಟಕ

karnataka

ETV Bharat / sitara

'ಗೆಹ್ರೈಯಾನ್‌'ನಲ್ಲಿ ದೀಪಿಕಾ-ಸಿದ್ಧಾಂತ್ ರೊಮ್ಯಾನ್ಸ್​​.. ರಣವೀರ್‌ನ ಅನುಮತಿ ಕೇಳಿದ್ದೀರಾ ಎಂಬ ಕಾಮೆಂಟ್​ಗೆ ನಟಿಯ ಉತ್ತರವೇನು? - ರೊಮ್ಯಾಂಟಿಕ್​ ಸೀನ್​ ಬಗ್ಗೆ ದೀಪಿಕಾ ಪಡುಕೋಣೆ ಹೇಳಿಕೆ

'ಗೆಹ್ರೈಯಾನ್‌' ಪ್ರಚಾರದ ಸಂದರ್ಶನವೊಂದರಲ್ಲಿ, ಚಿತ್ರದ ಇಂಟಿಮೇಟ್ ದೃಶ್ಯಗಳಿಗಾಗಿ ರಣವೀರ್‌ನ ಅನುಮತಿ ಕೇಳಿದ್ದೀರಾ ಎಂಬ ಕಾಮೆಂಟ್‌ಗಳ ಬಗ್ಗೆ ನಟಿ ದೀಪಿಕಾ ಅವರನ್ನು ಕೇಳಲಾಯಿತು..

Did Deepika seek Ranveer's permission for Gehraiyaan intimate scenes? Actor says 'Yuk'
'ಗೆಹ್ರೈಯಾನ್‌'ನಲ್ಲಿ ದೀಪಿಕಾ-ಸಿದ್ಧಾಂತ್ ರೊಮ್ಯಾನ್ಸ್

By

Published : Feb 9, 2022, 4:03 PM IST

ಹೈದರಾಬಾದ್ (ತೆಲಂಗಾಣ) :ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂದಿನ ಚಿತ್ರ 'ಗೆಹ್ರೈಯಾನ್' ಸಲುವಾಗಿ ಸಖತ್​​ ಸುದ್ದಿಯಲ್ಲಿದ್ದಾರೆ.

ಲಿಪ್‌ಲಾಕ್, ರೊಮ್ಯಾಂಟಿಕ್ ಸೀನ್​ಗಳು ಒಂದಿಷ್ಟು ಮಂದಿಯ ಮನಸ್ಸು ಗೆದ್ದಿದ್ದರೆ, ಮತ್ತೊಂದಿಷ್ಟು ಮಂದಿ ಈ ಬಗ್ಗೆ ಟೀಕೆ- ಟಿಪ್ಪಣಿ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಸೀನ್​ಗಳ ವಿಚಾರವಾಗಿ ನಟಿ ದೀಪಿಕಾ ಪಡುಕೋಣೆಯ ಪತಿ ರಣ್​​ವೀರ್​ ಸಿಂಗ್​​ನನ್ನು ಕಾಮೆಂಟ್​​ ಸೆಕ್ಷನ್​​ಗೆ ಎಳೆದು ತರುತ್ತಿರುವ ವಿಚಾರ ಸಾಮಾನ್ಯವಾಗಿದೆ.

ಶಕುನ್ ಬಾತ್ರಾ ನಿರ್ದೇಶನದ 'ಗೆಹ್ರೈಯಾನ್' ಚಿತ್ರದ ಟ್ರೈಲರ್, ಪೋಸ್ಟರ್​​​ ಇತ್ತೀಚೆಗೆ ಬಿಡುಗಡೆಯಾಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ, ಧೈರ್ಯ ಕರ್ವಾ, ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೊಮ್ಯಾನ್ಸ್​ ಸೀನ್​ಗಳಿಂದ ಚಿತ್ರ ಸಖತ್​ ಸುದ್ದಿಯಲ್ಲಿದೆ.

ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ.

'ಗೆಹ್ರೈಯಾನ್‌' ಪ್ರಚಾರದ ಸಂದರ್ಶನವೊಂದರಲ್ಲಿ, ಚಿತ್ರದ ಇಂಟಿಮೇಟ್ ದೃಶ್ಯಗಳಿಗಾಗಿ ರಣವೀರ್‌ನ ಅನುಮತಿ ಕೇಳಿದ್ದೀರಾ ಎಂಬ ಕಾಮೆಂಟ್‌ಗಳ ಬಗ್ಗೆ ನಟಿ ದೀಪಿಕಾ ಅವರನ್ನು ಕೇಳಲಾಯಿತು.

ಇದಕ್ಕೆ ನಟಿ ದೀಪಿಕಾ ಪಡುಕೋಣೆ "Yuck!" ಎಂಬ ಒಂದು ಪದದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ಕಾಮೆಂಟ್​, ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವುದು ತುಂಬಾ ಮೂರ್ಖತನದ ವಿಚಾರ ಎನಿಸುತ್ತದೆ ಎಂದು ಹೇಳಿದರು.

ABOUT THE AUTHOR

...view details