ಹೈದರಾಬಾದ್:ಬಾಲಿವುಡ್ ನಟಿ ದಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಖುಷಿ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಮಗುವಿನ ಬೆರಳು ಹಿಡಿದಿರುವ ಫೋಟೋದೊಂದಿಗೆ ಕ್ಯಾಪ್ಶನ್ ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಅಮ್ಮ'ನಾಗುವ ಖುಷಿಯಲ್ಲಿ ನಟಿ ದಿಯಾ ಮಿರ್ಜಾ: ಬಾಲಿವುಡ್ ಗಣ್ಯರಿಂದ ಶುಭಾಶಯ
ಮೇ 14 ರಂದೇ ಮಗುವಿಗೆ ಜನ್ಮ ನೀಡಿರುವ ದಿಯಾ, ಇಂದು ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಅವ್ಯಾನ್ ಆಜಾದ್ ರೇಖಿ ಎಂದು ಮಗುವಿಗೆ ನಾಮಕರಣ ಮಾಡಿರುವ ಪತ್ನಿ ದಿಯಾ ಮಿರ್ಜಾ ಹಾಗೂ ಪತಿ ವೈಭವ್ ರೇಖಿ ದಂಪತಿ, ಇಷ್ಟು ದಿನಗಳವರೆಗೆ ಗುಟ್ಟಾಗಿಟ್ಟಿದ್ದ ಈ ವಿಷಯವನ್ನು ಇಂದು ಬಹಿರಂಗಪಡಿಸಿದ್ದಕ್ಕೆ ಕಾರಣ ಸಹ ನೀಡಿದ್ದಾರೆ.
ಗರ್ಭಾವಸ್ಥೆಯಲ್ಲಿನ ತೊಂದರೆಗಳಿಂದಾಗಿ ನನ್ನ ಮಗ ಇನ್ನೂ ಐಸಿಯುನಲ್ಲಿದ್ದಾನೆ. ಅವಧಿಗೂ ಮುನ್ನವೇ ಜನಿಸಿದ ನನ್ನ ಮಗನನ್ನು ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಈ ವಿಷಯವನ್ನು ಮುಚ್ಚಿಡಲಾಗಿತ್ತು ಎಂದು ಸಾಮಾಜಿಕ ಜಾಲತಾಣ Instagramನಲ್ಲಿ ತಮ್ಮನ್ನು ಆರೈಕೆ ಮಾಡಿದ ಕುಟುಂಬಕ್ಕೂ ಹಾಗೂ ಅಭಿಮಾನಿಗಳಿಗೆ ಒಂದು ಪುಟದಷ್ಟು ಅಭಿನಂದನಾಪೂರ್ವಕ ಕ್ಯಾಪ್ಶನ್ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಅದರಲ್ಲಿ ತಾಯಿತನದ ಅನುಭವನ್ನು ಸಹ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮಧುಚಂದ್ರಕೆ ಮಾಲ್ಡೀವ್ಸ್ಗೆ ಹಾರಿದ ದಿಯಾ ಮಿರ್ಜಾ-ವೈಭವ್
ಮೊದಲ ಮದುವೆಗೆ ವಿಚ್ಛೇದನ ಪಡೆದ ದಿಯಾ ಮಿರ್ಜಾ 11 ವರ್ಷದ ದಾಂಪತ್ಯಕ್ಕೆ ಅಂತ್ಯ ಹೇಳಿದ್ದರು. ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬದ ಸಮ್ಮುಖದಲ್ಲಿ ಇದೇ ಫೆಬ್ರವರಿ 15 ರಂದು ದಿಯಾ ಉದ್ಯಮಿ ವೈಭವ್ ರೇಖಿಯನ್ನು ಎರಡನೇ ಮದುವೆಯಾಗಿದ್ದರು. ಮದುವೆ ಬಳಿಕ ಹನಿಮೂನ್ಗೆ ತೆರಳಿದ್ದ ಅವರು ಕೆಲವು ದಿನಗಳ ನಂತರ ತಾವು ತಾಯಿ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 37ನೇ ವಯಸ್ಸಿಗೆ ಈಗ ಗಂಡು ಮಗುವಿಗೆ ಜನ್ಮ ನೀಡಿ ಮಗುನ ಆರೈಕೆಯಲ್ಲಿ ತೊಡಗಿದ್ದಾರೆ.
ನಟಿ ದಿಯಾ ಮಿರ್ಜಾ ಹಾಗೂ ಪತಿ ವೈಭವ್ ರೇಖಿ ಮದುವೆಯ ಫೋಟೋ