ಕರ್ನಾಟಕ

karnataka

ETV Bharat / sitara

'ಗಂಗೂಬಾಯಿ ಕಥಿಯಾವಾಡಿ' ಚಿತ್ರದಿಂದ ಹೊಸ ಹಾಡು ಬಿಡುಗಡೆ; ಸದ್ದು ಮಾಡುತ್ತಿದೆ ನ್ಯೂ ಟ್ರ್ಯಾಕ್​ - ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಸಿನಿಮಾಗಳು

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಿಂದ ಹೊಸ ಹಾಡೊಂದು ಬಿಡುಗಡೆಯಾಗಿದೆ. ಭಿನ್ನ ರೀತಿಯ ಸಿನಿಮಾವನ್ನು ಮಾಡಲು ಬನ್ಸಾಲಿ ಯಾವಾಗಲೂ ಉತ್ಸುಕರು. ಈ ಚಿತ್ರವನ್ನು ಅದೇ ರೀತಿಯಲ್ಲಿ ಹೆಣೆದಿದ್ದು ಶೀಘ್ರದಲ್ಲೇ ಪರದೆ ಮೇಲೆ ತೋರಿಸಲಿದ್ದಾರೆ.

'Dholida' from 'Gangubai Kathiawadi' sets the tone for Garba season
'Dholida' from 'Gangubai Kathiawadi' sets the tone for Garba season

By

Published : Feb 10, 2022, 7:09 PM IST

ಮುಂಬೈ: ಬಾಲಿವುಡ್​ ನಟಿ ಆಲಿಯಾ ಭಟ್​ ನಟನೆಯ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಿದ್ದು ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ನಟಿ ಆಲಿಯಾ ಭಟ್ ಬಿಳಿ ಸೀರೆಯನ್ನು ಧರಿಸಿ​ ಭರ್ಜರಿಯಾಗಿ ಸ್ಟೆಪ್​ ಹಾಕಿರುವ ‘ಡೋಲಿಡಾ..’ ಹಾಡು ಇಂದು ಬಿಡುಗಡೆ ಆಗಿದೆ. ಯೂಟ್ಯೂಬ್​ನಲ್ಲಿ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ಹಾಡು ಭಾರಿ ವೀಕ್ಷಣೆ ಕಂಡಿದೆ. ನಟಿಯ ನೃತ್ಯ ಮೋಡಿ ಮಾಡುವಂತಹದ್ದಿದೆ.

ಬಾಲಿವುಡ್​ ನಟಿ ಆಲಿಯಾ ಭಟ್​

ಚಿತ್ರನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಚಿತ್ರದ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಂಗೂಬಾಯಿ (ಆಲಿಯಾ ಭಟ್​) ಧೋಲ್ ರಾಗಗಳಿಗೆ ನೃತ್ಯ ಮಾಡುವ ಹಾಡು ಇದಾಗಿದೆ. ಕುಮಾರ್ ಬರೆದ ಸಾಹಿತ್ಯಕ್ಕೆ ಬನ್ಸಾಲಿಯವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ಕಚ್ಚಾ ಬಾದಾಮ್​ ಹಾಡಿಗೆ ಹೆಜ್ಜೆ ಹಾಕಿದ ಮಗಳ ವಿಡಿಯೋ ಹಂಚಿಕೊಂಡ ನಟ ಅಲ್ಲು ಅರ್ಜುನ್​

ಗಾರ್ಬಾದ ನಿಜವಾದ ಸಾರವನ್ನು ಹೇಳುವ ಈ ಹಾಡನ್ನು ಜಾಹ್ನವಿ ಶ್ರೀಮಾನ್ಕರ್ ಮತ್ತು ಶೈಲ್ ಹದಾ ಹಾಡಿದ್ದಾರೆ. ಕೃತಿ ಮಹೇಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡುಗಳಿಗೆ ಹೆಚ್ಚು ಮಹತ್ವ ನೀಡುವ ಸಂಜಯ್ ಲೀಲಾ ಬನ್ಸಾಲಿ ಮತ್ತೊಂದು ಟ್ರ್ಯಾಕ್‌ನೊಂದಿಗೆ ಗಮನ ಸೆಳೆಯಲಿದ್ದಾರೆ. ಚಿತ್ರವು ಇದೇ ಫೆ.25ರಂದು ಅದ್ಧೂರಿಯಾಗಿ ರಿಲೀಸ್​ ಆಗಲಿದೆ.

ABOUT THE AUTHOR

...view details