ಧನುಷ್, ತಮಿಳು ಚಿತ್ರರಂಗದಲ್ಲಿ ನಟ, ಗಾಯಕ, ಸಾಹಿತಿ, ನಿರ್ಮಾಪಕ, ಹಂಚಿಕೆದಾರ, ಬರಹಗಾರ ಹಾಗೂ ನಿರ್ದೇಶಕನಾಗಿ ಮಿಂಚುತ್ತಿರುವ ಪ್ರತಿಭೆ. ಕಾಲಿವುಡ್ ಮಾತ್ರವಲ್ಲ ಇಂಗ್ಲಿಷ್-ಫ್ರೆಂಚ್ , ಹಿಂದಿ ಸಿನಿಮಾಗಳಲ್ಲೂ ಧನುಷ್ ನಟಿಸಿದ್ದಾರೆ.
ತಮ್ಮ ಮೂರನೇ ಹಿಂದಿ ಸಿನಿಮಾ ಅನೌನ್ಸ್ ಮಾಡಿದ ಧನುಷ್ - undefined
ತಮಿಳು ನಟ ಧನುಷ್ ಅಭಿನಯದ ಇಂಗ್ಲೀಷ್-ಫ್ರೆಂಚ್ 'The Extraordinary Journey of the Fakir' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಲಾಂಚ್ ವೇಳೆ ತಮ್ಮ ಮೂರನೇ ಸಿನಿಮಾವನ್ನು ಧನುಷ್ ಘೋಷಣೆ ಮಾಡಿದ್ದಾರೆ.
![ತಮ್ಮ ಮೂರನೇ ಹಿಂದಿ ಸಿನಿಮಾ ಅನೌನ್ಸ್ ಮಾಡಿದ ಧನುಷ್](https://etvbharatimages.akamaized.net/etvbharat/prod-images/768-512-3481063-thumbnail-3x2-dhanush.jpg)
ಧನುಷ್ ಮೊದಲ ಇಂಗ್ಲೀಷ್-ಫ್ರೆಂಚ್ 'The Extraordinary Journey of the Fakir' ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ವೇಳೆ ಧನುಷ್ ತಮ್ಮ ಮೂರನೇ ಹಿಂದಿ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಮುನ್ನ ಅವರು 'ರಂಜಾನಾ' 'ಶಮಿತಾಬ್' ಎಂಬ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಆನಂದ್ ಎಲ್. ರಾಯ್ ನಿರ್ದೇಶನದ ಮತ್ತೊಂದು ಹಿಂದಿ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದಾರೆ. 'ರಂಜಾನಾ' ಸಿನಿಮಾವನ್ನು ಕೂಡಾ ಆನಂದ್ ಎಲ್. ರಾಯ್ ನಿರ್ದೇಶಿಸಿದ್ದರು. ಹೊಸ ಸಿನಿಮಾದ ಚಿತ್ರತಂಡ ಹಾಗೂ ತಾರಾಗಣದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ.
'The Extraordinary Journey of the Fakir' ಇಂಗ್ಲಿಷ್-ಫ್ರೆಂಚ್ ಸಿನಿಮಾವಾಗಿದ್ದು ಕೆನ್ ಸ್ಕಾಟ್ ನಿರ್ದೇಶಿಸಿದ್ದಾರೆ. ಜೂನ್ 21 ರಂದು ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ನಾಲ್ಕೂ ಭಾಷೆಗಳಲ್ಲಿ ಸಿನಿಮಾ ಭಾರತದಲ್ಲಿ ಬಿಡುಗಡೆಯಾಗಲಿದೆ.