ಮುಂಬೈ : ನವದೆಹಲಿಯ ಸರ್ ಗಂಗಾರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಾಯಿ ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ನಟಿ ದೀಪಿಕಾ ಸಿಂಗ್ ತಿಳಿಸಿದ್ದಾರೆ.
ಕೊರೊನಾ ಮುಕ್ತರಾದ ನಟಿ ದೀಪಿಕಾ ಸಿಂಗ್ ತಾಯಿ
ನನ್ನ ತಾಯಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ, ಬೆಂಬಲ ನೀಡಿ ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಅವರು ಮನೆಗೆ ಮರಳಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ನಟಿ ದೀಪಿಕಾ ಸಿಂಗ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ಮುಕ್ತರಾದ ನಟಿ ದೀಪಿಕಾ ಸಿಂಗ್ ತಾಯಿ
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಅವರು, ನನ್ನ ತಾಯಿ ಸೋಂಕಿಗೆ ತುತ್ತಾದ ಸುದ್ದಿ ಹೊರ ಬಿದ್ದಾಗಿನಿಂದ ನಿರಂತರವಾಗಿ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಕೃತಜ್ಞತೆಗಳು. ಈಗ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಜ್ಜಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ತಾಯಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ, ಬೆಂಬಲ ನೀಡಿ ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಅವರು ಮನೆಗೆ ಮರಳಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ದೀಪಿಕಾ ಸಿಂಗ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.