ಹೈದರಾಬಾದ್: ಚಲನಚಿತ್ರ ನಿರ್ಮಾಪಕ ಶಕುನ್ ಬಾತ್ರಾ ಅವರ ಮುಂಬರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ, ಇತ್ತೀಚಿನ ನಟರಾದ ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಮತ್ತು ಧೈರಿಯಾ ಕಾರ್ವಾ ಅವರೊಂದಿಗೆ ನಟಿಸಿದ್ದಾರೆ. ಚಿತ್ರದ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಚಿತ್ರದಲ್ಲಿ ದೀಪಿಕಾ ಪಾತ್ರದ ಒಂದು ಕುತೂಹಲಕಾರಿ ಅಂಶವು ವೆಬ್‌ಲಾಯ್ಡ್‌ಗೆ ಸಿಕ್ಕಿದೆ.
ವೆಬ್‌ಲಾಯ್ಡ್ ವರದಿಯ ಪ್ರಕಾರ, ಚಿತ್ರದಲ್ಲಿ ಫಿಟ್‌ನೆಸ್ ಕೋಚ್ ಪಾತ್ರವನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಸುಳಿವು ನೀಡಿಲ್ಲ, ಚಿತ್ರದ ಕುರಿತಾದ ಕೆಲವು ವದಂತಿಗಳನ್ನು ತಿರಸ್ಕರಿಸಿದೆ.