ಕರ್ನಾಟಕ

karnataka

ETV Bharat / sitara

ಎನ್​ಸಿಬಿ ನೋಟಿಸ್ ನಂತರ ದೀಪಿಕಾ ಪಡುಕೋಣೆ ಮ್ಯಾನೇಜರ್ ನಾಪತ್ತೆ! - ಕರಿಷ್ಮಾ ಪ್ರಕಾಶ್​ ನಾಪತ್ತೆ

ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದಾಗಿನಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್​ ಅವರನ್ನು ಪತ್ತೆ ಮಾಡಲು ಆಗುತ್ತಿಲ್ಲ ಎಂದು ಎನ್​ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Deepika Padukone's manager Karishma Prakash untraceable
ದಿಪಿಕಾ ಪಡುಕೋಣೆ ಮ್ಯಾನೇಜರ್ ನಾಪತ್ತೆ

By

Published : Nov 2, 2020, 12:03 PM IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಮಾದಕವಸ್ತು ಸಂಬಂಧಿತ ಪ್ರಕರಣವೊಂದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್​ಗೆ ಎನ್​ಸಿಬಿ ನೋಟಿಸ್ ನೀಡಿತ್ತು. ಆಗಿನಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ನಂತರದಿಂದ ಕರೀಷ್ಮಾ ಪ್ರಕಾಶ್‌ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಸತ್ಯವಾಗಿದೆ ಎಂದು ತನಿಖೆಗೆ ಸಂಬಂಧಿಸಿದ ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರೀಷ್ಮಾ ಪ್ರಕಾಶ್‌ ಅವರ ನಿವಾಸದಲ್ಲಿ 1.7 ಗ್ರಾಂ ಚರಸ್​​ ಮತ್ತು ಎರಡು ಬಾಟಲ್ ಸಿಬಿಡಿ ಎಣ್ಣೆ ಕಂಡು ಬಂದಿತ್ತು. ಆ ಬಳಿಕ ಅಂದರೆ, ಅಕ್ಟೋಬರ್ 27 ರಂದು ಎನ್‌ಸಿಬಿ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ದೀಪಿಕಾ ಮತ್ತು ಕರೀಷ್ಮಾ ಪ್ರಕಾಶ್ ಎನ್‌ಸಿಬಿ ಎದುರು ಒಮ್ಮೆ ವಿಚಾರಣೆಗಾಗಿ ಹಾಜರಾಗಿದ್ದರು. ಸುಶಾಂತ್ ಸಾವಿಗೆ ಮಾದಕವಸ್ತು ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಜೊತೆಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರನ್ನೂ ಎನ್​ಸಿಬಿ ಪ್ರಶ್ನಿಸಿತ್ತು.

ABOUT THE AUTHOR

...view details