ಕರ್ನಾಟಕ

karnataka

ETV Bharat / sitara

ದೀಪಿಕಾ ನಿರ್ಮಿಸಬೇಕು ಎಂದುಕೊಂಡಿದ್ದ 'ಮಹಾಭಾರತ' ಚಿತ್ರ ತಡವಾಗುತ್ತಿರಲು ಕಾರಣವೇನು..?

ತಮ್ಮ ಎಕೆ ಎಂಟರ್​​ಟೈನ್ಮೆಂಟ್​​​ ಬ್ಯಾನರ್ ಅಡಿ ದೀಪಿಕಾ ಪಡುಕೋಣೆ ನಿರ್ಮಿಸಬೇಕೆಂದುಕೊಂಡಿದ್ದ 'ಮಹಾಭಾರತ' ಚಿತ್ರವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ದೀಪಿಕಾ ಸದ್ಯಕ್ಕೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಷ್ಟೇ ಅಲ್ಲದೆ, ಚಿತ್ರಕ್ಕೆ ಸೂಕ್ತ ನಿರ್ದೇಶಕ ದೊರೆಯದಿರುವುದು ಈ ಚಿತ್ರ ತಡವಾಗಲು ಕಾರಣ ಎನ್ನಲಾಗುತ್ತಿದೆ.

Deepika padukone
ದೀಪಿಕಾ ಪಡುಕೋಣೆ

By

Published : Jan 19, 2021, 11:32 AM IST

'ಆರ್​ಆರ್​ಆರ್' ಚಿತ್ರದ ನಂತರ ಸ್ಟಾರ್ ನಿರ್ದೇಶಕ ಎಸ್​​.ಎಸ್. ರಾಜಮೌಳಿ ಭಾರತೀಯ ಚಿತ್ರರಂಗದ ಸ್ಟಾರ್​​ ನಟರೊಂದಿಗೆ ಮಹಾಭಾರತ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಇದೇ ವೇಳೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡಾ ತಾವು ಮಹಾಭಾರತ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇವರೆಡೂ ಸಿನಿಮಾ ಒಂದೇ ಇರಬಹುದಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುವ ವೇಳೆಗೆ ರಾಜಮೌಳಿ ಮಾಡುತ್ತಿರುವ ಸಿನಿಮಾ ಬೇರೆ ದೀಪಿಕಾ ಮಾಡುತ್ತಿರುವ ಸಿನಿಮಾ ಬೇರೆ ಎಂಬ ವಿಚಾರ ಸ್ಪಷ್ಟವಾಯಿತು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

'ಚಪಾಕ್' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ದೀಪಿಕಾ ಪಡುಕೋಣೆ ತಮ್ಮ ಕೆಎ ಎಂಟರ್​​ಟೈನ್ಮೆಂಟ್ ಬ್ಯಾನರ್ ಅಡಿ ಎರಡನೇ ಪ್ರಾಜೆಕ್ಟ್ ಆಗಿ 'ಮಹಾಭಾರತ' ಸಿನಿಮಾವನ್ನು ನಿರ್ಮಿಸುತ್ತಿದ್ದೇನೆ. ಈ ಚಿತ್ರದಲ್ಲಿ ದೀಪಿಕಾ ದ್ರೌಪದಿ ಪಾತ್ರದಲ್ಲಿ ನಟಿಸಲಿದ್ದು, ದ್ರೌಪದಿ ಪಾತ್ರವನ್ನು ಹೈಲೈಟ್ ಮಾಡಲಾಗುವುದು ಎನ್ನಲಾಗಿತ್ತು. ಈ ಸಿನಿಮಾವನ್ನು ಸರಣಿಗಳನ್ನಾಗಿ ತೆಗೆದು, ಮೊದಲ ಭಾಗವನ್ನು 2021 ದೀಪಾವಳಿ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಈಗ ದೀಪಿಕಾ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಸದ್ಯಕ್ಕೆ ದೀಪಿಕಾ ಈ ಸಿನಿಮಾ ನಿರ್ಮಾಣದ ವಿಚಾರವನ್ನು ಮುಂದೂಡಿದ್ದಾರೆ. ಪರಿಸ್ಥಿತಿ ಅನುಕೂಲವಾದಾಗ ಮಾತ್ರ ಈ ಚಿತ್ರವನ್ನು ಮಾಡುವುದಾಗಿ ದೀಪಿಕಾ ಹೇಳಿದ್ದಾರೆ.

ಬಹುನಿರೀಕ್ಷಿತ ಮಹಾಭಾರತ ಸಿನಿಮಾ ಮುಂದೂಡಿದ ದೀಪಿಕಾ

ಇದನ್ನೂ ಓದಿ: ಯಾರನ್ನೂ ನೋಯಿಸೋ ಉದ್ದೇಶವಿಲ್ಲ: ಭೇಷರತ್ ಕ್ಷಮೆಯಾಚಿಸಿದ 'ತಾಂಡವ್' ತಂಡ

ಇನ್ನು ದೀಪಿಕಾ ಈ ಸಿನಿಮಾ ಮುಂದೂಡಲು ಕಾರಣ ಚಿತ್ರಕ್ಕೆ ಸೂಕ್ತ ನಿರ್ದೇಶಕ ದೊರೆಯದಿರುವುದು ಎನ್ನಲಾಗಿದೆ. ಈ ಚಿತ್ರವನ್ನು ದೀಪಿಕಾ ನಿರ್ಮಾಪಕ ಮಧು ಮಂತೇನಾ ಜೊತೆ ಸೇರಿ ನಿರ್ಮಿಸಲು ನಿರ್ಧರಿಸಿದ್ದರು. ಅಲ್ಲದೆ ಚಿತ್ರವನ್ನು ನಿರ್ದೇಶಿಸಲು ಅನೇಕ ನಿರ್ದೇಶಕರೊಂದಿಗೆ ಮಾತನಾಡಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಕೂಡಾ ಈ ಚಿತ್ರದ ಬಗ್ಗೆ ಆಸಕ್ತಿ ವಹಿಸಿದ್ದರು. ಆದರೆ ನಂತರ ದೀಪಿಕಾ ಇತರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಿಂದ ಸದ್ಯಕ್ಕೆ ಮಹಾಭಾರತ ಚಿತ್ರ ನಿರ್ಮಾಣವನ್ನು ಮುಂದೂಡಿದ್ದಾರೆ. ಸದ್ಯಕ್ಕೆ ದೀಪಿಕಾ ಪಡುಕೋಣೆ ಶಕುನ್ ಬಾತ್ರಾ ಅವರ '83' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಕೂಡಾ ದೀಪಿಕಾ ಸಹ ನಿರ್ಮಾಣವಿದೆ.

ABOUT THE AUTHOR

...view details