ಮುಂಬೈ: ಬಾಲಿವುಡ್ನ ಸ್ಟಾರ್ ನಟಿ ದೀಪಿಕಾ ಪಡುಕೊಣೆ ಸದ್ಯ ಗೋವಾದಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಟ್ಟಿದ್ದ ಅವರು, ಇದೀಗ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಎನ್ಸಿಬಿ ವಿಚಾರಣೆ ಮುಗಿಸಿ ಶೂಟಿಂಗ್ನಲ್ಲಿ ಭಾಗಿಯಾದ ದೀಪಿಕಾ! - ಬಾಲಿವುಡ್ನ ಸ್ಟಾರ್ ನಟಿ ದೀಪಿಕಾ ಪಡುಕೊಣೆ
ಬಾಲಿವುಡ್ ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೊಳಗಾಗಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಗೋವಾದಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
Deepika Padukone
ಸೆಪ್ಟೆಂಬರ್ 26ರಂದು ದೀಪಿಕಾ ಪಡುಕೊಣೆಗೆ ಸಮನ್ಸ್ ನೀಡಲಾಗಿತ್ತು. ಹೀಗಾಗಿ ಗೋವಾದಿಂದ ವಾಪಸ್ ಆಗಿದ್ದ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ದೀಪಿಕಾ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣಕ್ಕಾಗಿ ಇದೀಗ ಮತ್ತೊಮ್ಮೆ ಗೋವಾಕ್ಕೆ ತೆರಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಮನ್ಸ್ ಜಾರಿ ಮಾಡಿತ್ತು.