ಕರ್ನಾಟಕ

karnataka

ETV Bharat / sitara

ದೀಪಿಕಾ ಪಡುಕೋಣೆ ಗರ್ಭಿಣಿಯೇ? ಮಕ್ಕಳ ಬಗ್ಗೆ ಅವರು ಹೇಳಿದ್ದೇನು? - ಗಾಸಿಪ್​ ಸುದ್ದಿ ಬಗ್ಗೆ ದೀಪಿಕಾ ಪ್ರತಿಕ್ರಿಯೆ

ಬಾಲಿವುಡ್​​ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ​ ಗರ್ಭಿಣಿ ಆಗಿದ್ದು ನಿಜಾನಾ? ಇಂತಹದ್ದೊಂದು ಗಾಸಿಪ್​ ಸುದ್ದಿ ಬಗ್ಗೆ ಸ್ವತಃ ಅವರೇ ಬಾಯ್ಬಿಚ್ಚಿದ್ದಾರೆ.

ಬಾಲಿವುಡ್​​ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ

By

Published : Oct 12, 2019, 6:12 PM IST

ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಭವಿಷ್ಯ ಹೇಗಿರಲಿದೆ ಅನ್ನೋದನ್ನು ಬಹಿರಂಗ ಮಾಡಿದ್ದಾರೆ ಬಿಟೌನ್​ ಬೆಡಗಿ ಡಿಪ್ಪಿ. ಮದುವೆಯಾದ ಬಳಿಕ ಅಕ್ಕಪಕ್ಕದ ಜನರು ಮಕ್ಕಳ ಬಗ್ಗೆ ಮಾತನಾಡುವುದು ಸಾಮಾನ್ಯ. ಇದೀಗ ಇಂತಹ ಸುದ್ದಿಗಳು ನನ್ನ ಕಿವಿಗೂ ಬೀಳಲಾಂಭಿಸಿವೆ. ಆದರೆ, ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಗಾಸಿಪ್ ಹರಡುವವರಿಗೆ ಚಾಟಿ ಬೀಸಿದ್ದಾರೆ.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ - ಸಂಗ್ರಹ ಚಿತ್ರ

ಮಕ್ಕಳೆಂದರೆ ನಮಗೂ ಇಷ್ಟ. ಆದ್ರೆ ಈಗಲೇ ಆ ನಿರ್ಧಾರಕ್ಕೆ ಬಂದಿಲ್ಲ. ಈಗ ನಾವು ನಮ್ಮ ಕರಿಯರ್ ಬಗ್ಗೆ ಗಮನ ಹರಿಸಿದ್ದೇವೆ. ನಮ್ಮ ಗುರಿ ಬೇರೆಡೆ ಇದೆ. ಮಕ್ಕಳನ್ನು ಹೊಂದುವ ಉದ್ದೇಶ ಇದೆ. ಈ ವೇಳೆ ಮಕ್ಕಳನ್ನು ಹೊಂದುವುದರಲ್ಲಿ ನ್ಯಾಯವಿರಬಹುದು. ಆದರೆ ನಾವು ಮಕ್ಕಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಹರಿದಾಡುತ್ತಿರುವ ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.

ದೀಪಿಕಾ ಪಡುಕೋಣೆ - ಸಂಗ್ರಹ ಚಿತ್ರ

ದೀಪಿಕಾ ಪಡುಕೋಣೆ​ ಸದ್ಯಕ್ಕೆ 'ಛಪಾಕ್​' ಮತ್ತು '83' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ - ಸಂಗ್ರಹ ಚಿತ್ರ

ABOUT THE AUTHOR

...view details