ಹೈದರಾಬಾದ್: ರೋಹಿತ್ ಶೆಟ್ಟಿ ಹಾಗೂ ರಣವೀರ್ ಸಿಂಗ್ ಮತ್ತೊಮ್ಮೆ 'ಸರ್ಕಸ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡಾ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ. ವಿಲಿಯಂ ಷೇಕ್ಸ್ಪಿಯರ್ 'ಕಾಮಿಡಿ ಆಫರ್ ಎರರ್ಸ್' ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.
ಮತ್ತೊಂದು ಹೊಸ ಚಿತ್ರದಲ್ಲಿ ಜೊತೆಯಾಗುತ್ತಿರುವ ದೀಪ್ವೀರ್
'83' ಚಿತ್ರದಲ್ಲಿ ರಣವೀರ್ ಹಾಗೂ ದೀಪಿಕಾ ಜೋಡಿಯಾಗಿ ನಟಿಸುತ್ತಿದ್ದು ಇದೀಗ ಹೊಸ ಸಿನಿಮಾದಲ್ಲಿ ಕೂಡಾ ಇಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ರೋಹಿತ್ ಶೆಟ್ಟಿ ಅಭಿನಯದ 'ಸರ್ಕಸ್' ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: "ನಿಮ್ಮ ಪ್ರೀತಿ ಅಭಿಮಾನಕ್ಕೆ ಕೊನೆಯವರೆಗೂ ಚಿರಋಣಿ ಆಗಿರ್ತೀನಿ"ಎಂದ ಚಿರು
ಮತ್ತೊಂದೆಡೆ ರಣವೀರ್ ಹಾಗೂ ದೀಪಿಕಾ '83' ಚಿತ್ರದಲ್ಲಿ ಕೂಡಾ ಪತಿ-ಪತ್ನಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೂಡಾ ಅವರು ಜೋಡಿಗಳಾಗಿ ನಟಿಸುತ್ತಿದ್ದು ತೆರೆ ಮೇಲೆ ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂಬುದನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಈ 'ಸರ್ಕಸ್' ಚಿತ್ರೀಕರಣ ಆರಂಭವಾಗಿದೆ. ಮುಂಬೈ ಜೊತೆಗೆ ಊಟಿ, ಗೋವಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಡಬಲ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡಿಸ್, ವರುಣ್ ಶರ್ಮಾ, ಜಾನಿ ಲಿವರ್, ಸಿದ್ದಾರ್ಥ್ ಜಾಧವ್ ಹಾಗೂ ಇನ್ನಿತರರು ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ವರ್ಷದ ಅಂತ್ಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ 'ಸರ್ಕಸ್' ಚಿತ್ರವನ್ನು ಹೊರತುಪಡಿಸಿ ಬಾಲಿವುಡ್ನಲ್ಲಿ 1982 ರಲ್ಲಿ ಸಂಜೀವ್ ಕುಮಾರ್, ದೇವನ್ ವರ್ಮಾ ನಟಿಸಿದ್ದ ಅಂಗೂರ್, 1968 ರಲ್ಲಿ ಕಿಶೋರ್ ಕುಮಾರ್ ಹಾಗೂ ಅಸಿತ್ ಸೇನ್ ನಟಿಸಿದ್ದ ದೊ ದೋನಿ ಚಾರ್ ಚಿತ್ರದಲ್ಲಿ ಕೂಡಾ ವಿಲಿಯಂ ಷೇಕ್ಸ್ಪಿಯರ್ ಬರೆದ ಕಥೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.