ಕರ್ನಾಟಕ

karnataka

ETV Bharat / sitara

ಕೊನೆಗೂ ತೆರೆ ಮೇಲೆ ಬರಲಿದೆಯಾ ಹೃತಿಕ್ - ದೀಪಿಕಾ ಜೋಡಿ?

ದೀಪಿಕಾ ಪಡುಕೋಣೆ ಜನ್ಮದಿನಕ್ಕೆ ನಟ ಹೃತಿಕ್ ರೋಷನ್ ಮಾಡಿದ ವಿಶ್​ಗೆ ದೀಪಿಕಾ ಪ್ರತಿಕ್ರಿಯೆ ನೀಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

Deepika, Hrithik
ಹೃತಿಕ್ - ದೀಪಿಕಾ

By

Published : Jan 8, 2021, 3:14 PM IST

ಹೈದರಾಬಾದ್:ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಜೋಡಿಯನ್ನು ತೆರೆಯ ಮೇಲೆ ನೋಡಬೇಕೆಂದು ಅಭಿಮಾನಿಗಳು ಎಷ್ಟೋ ವರ್ಷದಿಂದ ಕಾಯುತ್ತಿದ್ದಾರೆ. ಫ್ಯಾನ್ಸ್​ ಉತ್ಸುಕತೆಗೆ ಇದೀಗ ದೀಪಿಕಾರ ಟ್ವೀಟ್​ ಪುಷ್ಠಿ ನೀಡಿದೆ.

ಜನವರಿ 5 ರಂದು ಪಡುಕೋಣೆ ತಮ್ಮ 35ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆದರೆ ಹೃತಿಕ್ ರೋಷನ್ ಮಾಡಿದ ವಿಶ್​ಗೆ ದೀಪಿಕಾ ಪ್ರತಿಕ್ರಿಯೆ ಮಾತ್ರ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ‘What a great teaser’ ಎಂದು ಯಶ್​ಗೆ ಬರ್ತ್​ಡೇ ವಿಶ್​ ಕೋರಿದ ಹೃತಿಕ್​!

"ನನ್ನ ಪ್ರೀತಿಯ ದೀಪಿಕಾ ಪಡುಕೋಣೆಗೆ ಜನ್ಮದಿನದ ಶುಭಾಶಯಗಳು. ನಿಮ್ಮಂತೆಯೇ ಜಗತ್ತನ್ನು ಬೆಳಗಿಸಿ ಮತ್ತು ಬೆರಗುಗೊಳಿಸಿ. ಯಾವಾಗಲೂ ನನ್ನ ಕಡೆಯಿಂದ ಬೆಸ್ಟ್ ವಿಶ್​ ಇರುವುದು" ಎಂದು ಕ್ರಿಶ್​ ನಟ ಟ್ವೀಟ್​ ಮಾಡಿದ್ದರು. ಇದಕ್ಕೆ ದೀಪಿಕಾ, "ತುಂಬಾ ಧನ್ಯವಾದಗಳು.. ಕೆಲ ದಿನಗಳಲ್ಲೇ ಮತ್ತೊಂದು ದೊಡ್ಡ ಆಚರಣೆಯಿದೆ" ಎಂದು ರಿಟ್ವೀಟ್​ ಮಾಡಿರುವುದು ಶೀಘ್ರದಲ್ಲೇ ಇಬ್ಬರೂ ಸ್ಕ್ರೀನ್​ ಶೇರ್​ ಮಾಡುವ ಸಿಹಿ ಸುದ್ದಿ ನೀಡುತ್ತಾರೆಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆದರೆ ಜನವರಿ 10 ರಂದು ಹೃತಿಕ್ ರೋಷನ್ ಹುಟ್ಟುಹಬ್ಬವಾಗಿದ್ದು, ಈ ದೃಷ್ಟಿಯಲ್ಲಿ ದೀಪಿಕಾ 'ಕೆಲ ದಿನಗಳಲ್ಲೇ ಮತ್ತೊಂದು ದೊಡ್ಡ ಆಚರಣೆಯಿದೆ' ಎಂದು ಕೂಡ ಹೇಳಿರಬಹುದು.

ABOUT THE AUTHOR

...view details