ಕರ್ನಾಟಕ

karnataka

ETV Bharat / sitara

ಮಾಜಿ ಪ್ರಿಯಕರನ ತಾಯಿಯಿಂದ ಡಿಪ್ಪಿಗೆ ಸಿಕ್ತು ಸ್ಪೆಷಲ್​ ಗಿಫ್ಟ್​​....! - ಡಿಪ್ಪಿ

ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್​ ಹಾಗೂ ತಾಯಿ ನೀತು ಕಪೂರ್​ ಸೇರಿ ದೀಪಿಕಾ ಪಡುಕೊಣೆಗೆ ಒಂದು ಅಮೂಲ್ಯ ಗಿಫ್ಟ್​ ಕೊಟ್ಟಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 13, 2019, 11:13 PM IST

Updated : May 13, 2019, 11:52 PM IST

ನಟಿ ದೀಪಿಕಾ ಪಡುಕೋಣೆ ರಣ್​ವೀರ್​ ಸಿಂಗ್​ ಜತೆ ಮ್ಯಾರೇಜ್​ ಮಾಡ್ಕೊಂಡು ಹಾಯಾಗಿ ಲೈಫ್​ ಲೀಡ್ ಮಾಡ್ತಿದ್ದಾರೆ. ಆದರೆ, ಈ ಗಲ್ಲಿ ಬಾಯ್​ ಜತೆ ಲವ್​ನಲ್ಲಿ ಬೀಳೋ ಮುಂಚೆ ಡಿಪ್ಪಿ ರಣಬೀರ್ ಕಪೂರ್​​ ಜತೆ ಪ್ರೀತಿಯಲ್ಲಿದ್ದರೂ ಅನ್ನೋದು ಎಲ್ಲರಿಗೂ ಗೊತ್ತು.

ಕೆಲ ವರ್ಷಗಳ ಹಿಂದೆ ರಣಬೀರ್​ ಜತೆ ಬ್ರೇಕಪ್ ಮಾಡಿಕೊಂಡಿದ್ದ ದೀಪಿಕಾ, ಆತನಿಂದ ದೂರವಾಗಿದ್ದಳು. ಆದರೆ, ಪ್ರೀತಿ ಇಲ್ಲದಿದ್ದರೇನಂತೆ ಸ್ನೇಹಿತರಾಗಿರೋಣ ಎಂದಿದ್ದ ಡಿಪ್ಪಿ ಫ್ರೆಂಡ್​ಶೀಪ್​ ಕಂಟಿನ್ಯೂ ಮಾಡಿದ್ದರು. ಈಗಲೂ ಕೂಡ ಗುಡ್​ ಫ್ರೆಂಡ್ಸ್​ ಆಗಿಯೇ ಮೂವ್ ಆಗ್ತಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

ಡಿಪ್ಪಿ, ಮೊನ್ನೆಯಷ್ಟೆ ನ್ಯೂಯಾರ್ಕ್​​ನಲ್ಲಿರುವ ರಣಬೀರ್​ ಕಪೂರ್​ ತಂದೆ ರಿಷಿ ಕಪೂರ್ ಹಾಗೂ ತಾಯಿ ನೀತು ಕಪೂರ್​ ಅವರನ್ನು ಭೇಟಿಯಾಗಿದ್ದರು. ಕೆಲಹೊತ್ತು ಅವರೊಂದಿಗೆ ಕಳೆದು ಯೋಗಕ್ಷೇಮ ವಿಚಾರಿಸಿಕೊಂಡಿದ್ದರು. ತಮ್ಮ ಮನೆಗೆ ಬಂದ ದೀಪಿಕಾಗೆ ನೀತು ಬಂಗಾರದ ಬ್ರಾಸ್​ಲೆಟ್​ ಗಿಫ್ಟ್ ಮಾಡಿದ್ದಾರೆ. ಖುಷಿಯಿಂದಲೇ ಅದನ್ನು ಸ್ವೀಕರಿಸಿರುವ ಡಿಪ್ಪಿ, ತಮ್ಮ ಕೈಯಲ್ಲಿ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಅದನ್ನು ಇನ್​ಸ್ಟಾಗ್ರಾಂ ಸ್ಟೇಟಸ್​​ನಲ್ಲಿ ಹಾಕಿಕೊಂಡಿದ್ದಾರೆ.

Last Updated : May 13, 2019, 11:52 PM IST

ABOUT THE AUTHOR

...view details