ನಿನ್ನೆ ವಿಶ್ವಾದ್ಯಂತ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ತಾಯಿ ಹಾಗೂ ತಂಗಿ ಜೊತೆಗೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ಅಮ್ಮ, ತಂಗಿ ಜೊತೆಗಿನ ಸುಂದರ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ
ನಿನ್ನೆ ಶಾಲಾ ದಿನಗಳಲ್ಲಿ ತೆಗೆಸಿದ್ದ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ದೀಪಿಕಾ ಪಡುಕೋಣೆ, ಇಂದು ಅಮ್ಮ ಹಾಗೂ ತಂಗಿ ಜೊತೆ ಇರುವ ಪೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ.
ನಿನ್ನೆ ತಮ್ಮ ಶಾಲಾದಿನದ ಪೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ದೀಪಿಕಾ ತನ್ನ ತಾಯಿ ಶಾಲಾದಿನಗಳಲ್ಲಿ ನನಗೆ ಹೇಗೆ ಪ್ರೋತ್ಸಾಹ ನೀಡುತ್ತಿದ್ದರು ಎಂಬ ವಿಚಾರವನ್ನು ಹೇಳಿಕೊಂಡಿದ್ದರು. ಇಂದು ತಾಯಿ ಉಜ್ವಲಾ ಹಾಗೂ ತಂಗಿ ಅನಿಶಾ ಜೊತೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ದೀಪಿಕಾ 'ಐ ಲವ್ ಯು ಅಮ್ಮ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಪೋಟೋದಲ್ಲಿ ಮೂವರೂ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದು ಅಭಿಮಾನಿಗಳು ಈ ಫೋಟೋವನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಲಾಕ್ಡೌನ್ ಆರಂಭವಾದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ದೀಪಿಕಾ ಇತ್ತೀಚೆಗೆ ಮಾವಿನ ಕಾಯಿ ಪೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ದೀಪಿಕಾ ತಾಯಿಯಾಗುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ದೀಪಿಕಾ ಏನೂ ಪ್ರತಿಕ್ರಿಯಿಸಿಲ್ಲ.