ನವದೆಹಲಿ: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದ್ದಕ್ಕಾಗಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆಗೆ 26ನೇ ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಾನಸಿಕ ಆರೋಗ್ಯದ ಕುರಿತು ಜಾಗೃತಿ.. ಮಸ್ತಾನಿ ಮುಡಿಗೆ 'ಕ್ರಿಸ್ಟಲ್ ಅವಾರ್ಡ್' - Deepika Padukone latest news
2015ರ ಜೂನ್ನಲ್ಲಿ 'ದಿ ಲಿವ್ ಲವ್ ಲಾಫ್ ಫೌಂಡೇಷನ್'(TLLLF) ಎಂಬ ಸಂಸ್ಥೆಯನ್ನು ಸ್ಥಾಪಿಸಿದ ದೀಪಿಕಾ, ಇದರ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಹಾಗೂ ಅಭಿಯಾನಗಳನ್ನು ಕೈಗೊಳ್ಳಲು ಆರಂಭಿಸಿದರು. ಇದೀಗ ಅವರ ಈ ಸೇವೆಗೆ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪಡೆದು ಮಾತನಾಡಿದ ಪಡುಕೋಣೆ ಜಗತ್ತಿನಲ್ಲಿ 300 ಮಿಲಿಯನ್ಗಿಂತಲೂ ಅಧಿಕ ಜನರು ಅನಾರೋಗ್ಯ, ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಆರೋಗ್ಯ ಮತ್ತು ಸಾಮಾಜಿಕ ಹೊರೆಗಳನ್ನು ನಾವು ಆಕ್ರಮಣಕಾರಿಯಾಗಿ ಪರಿಹರಿಸಬೇಕಾಗಿದೆ. ಈ ವರ್ಷದ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ನಾನು ನಮ್ರಳಾಗಿದ್ದೇನೆ. ನನಗೆ ಒಲಿದು ಬಂದಿರುವ ಈ ಪ್ರಶಸ್ತಿಯನ್ನು ಮಾನಸಿಕ ಅಸ್ವಸ್ಥತೆ, ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮನೋರೋಗದಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.
2015ರ ಜೂನ್ನಲ್ಲಿ 'ದಿ ಲಿವ್ ಲವ್ ಲಾಫ್ ಫೌಂಡೇಷನ್' (TLLLF) ಎಂಬ ಸಂಸ್ಥೆಯನ್ನು ಸ್ಥಾಪಿಸಿದ ದೀಪಿಕಾ, ಇದರ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಹಾಗೂ ಅಭಿಯಾನಗಳನ್ನು ಕೈಗೊಳ್ಳಲು ಆರಂಭಿಸಿದರು. ಈ ಸಂಸ್ಥೆಯು ಹದಿಹರೆಯದವರಲ್ಲಿ ಆರೋಗ್ಯ ಮತ್ತು ಮಾನಸಿಕ ಅಸ್ವಸ್ಥತೆಗಳ ಕುರಿತು ಜಾಗೃತಿ ಮೂಡಿಸಲು ತರಬೇತಿ, ಸಂಶೋಧನೆ ಮತ್ತು ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಸದ್ಯ ದೀಪಿಕಾ, ತಮ್ಮ ಮುಂದಿನ ಸಿನಿಮಾ 'ಚಪಾಕ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರವು ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ರ ಜಿಔನ ಕಥೆ ಆಧರಿಸಿದ್ದು, ಜನವರಿ 10, 2020 ರಂದು ತೆರೆಗೆ ಬರಲಿದೆ.