ಕರ್ನಾಟಕ

karnataka

ETV Bharat / sitara

ಪಡುಕೋಣೆಗೆ ಸಮನ್ಸ್ ಜಾರಿ: ನಾಳೆ ಎನ್‌ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಲಿರುವ ಡಿಪ್ಪಿ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ (NCB) ಸಮನ್ಸ್ ಜಾರಿಯಿಂದ ವಿಚಲಿತರಾಗಿರುವ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಶುಕ್ರವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

Deepika Padukone acknowledges summons, to face NCB on Friday
ನಟಿ ದೀಪಿಕಾ ಪಡುಕೋಣೆ

By

Published : Sep 24, 2020, 8:05 PM IST

ಮುಂಬೈ : ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸಮನ್ಸ್ ಜಾರಿಗೊಳಿಸಿದ್ದು, ನಾಳೆ ತನಿಖೆಯನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ಇದೆ.

ಶುಕ್ರವಾರ (ನಾಳೆ) ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಅವರ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ದೀಪಿಕಾ ಅವರ ಕಾನೂನು ಸಲಹಾ ತಂಡ ತನಿಖಾ ಸಂಸ್ಥೆಗೆ ಮಾಹಿತಿ ನೀಡಿರುವುದಾಗಿ ಎನ್‌ಸಿಬಿ ಮೂಲಗಳು ತಿಳಿಸಿದೆ.

ದೀಪಿಕಾ ತನ್ನ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರ ಜೊತೆ ಮಾಡಿದ ನಿಷೇಧಿತ ವಸ್ತುಗಳ ಬಗೆಗಿನ ವಾಟ್ಸ್​ಆ್ಯಪ್​​ ಚಾಟ್​ಗಳು​ ಸಿಕ್ಕಿದ್ದರಿಂದ ಎನ್‌ಸಿಬಿ ಅಧಿಕಾರಿಗಳ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇನ್ನು ಚಿತ್ರೀಕರಣದ ನಿಮಿತ್ತ ಇದೀಗ ಗೋವಾದಲ್ಲಿರುವ ದೀಪಿಕಾ, ಮುಂಬೈಗೆ ತೆರಳಲಿದ್ದಾರೆ. ದೀಪಿಕಾ ಜೊತೆಗೆ ಮ್ಯಾನೇಜರ್​ ಕರಿಷ್ಮಾ ಅವರನ್ನೂ ಎನ್​ಸಿಬಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ ಎಂಬ ಮಾಹಿತಿ ಇದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ ಆಂಗಲ್ ಬಗ್ಗೆ ತನಿಖೆಯ ವ್ಯಾಪ್ತಿ ವಿಸ್ತರಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ನಟಿಮಣಿಗಳಾದ ದೀಪಿಕಾ ಪಡುಕೋಣೆ ಅಲ್ಲದೇ, ನಟರಾದ ಸೈಫ್ ಅಲಿ ಖಾನ್ ಮತ್ತು ಅಮೃತ ಸಿಂಗ್ ಅವರ ಪುತ್ರಿಯಾದ ಸಾರಾ ಅಲಿ ಖಾನ್​ಗೆ, ಹಿರಿಯ ನಟ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್​​ಗೆ ಮತ್ತು ರಕುಲ್ ಪ್ರೀತ್ ಸಿಂಗ್​ಗೆ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.

ABOUT THE AUTHOR

...view details