ವಿವಾಹದ ಬಳಿಕ ಕೈತುಂಬಾ ಸಿನಿಮಾಗಳ ಆಫರ್ ಹಿಡಿದುಕೊಂಡು ಓಡಾಡುತ್ತಿರುವ ದೀಪಿಕಾ ಪಡುಕೋಣೆ, ಇದೀಗ ಛಪಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಡಿಪ್ಪಿ 'ಛಪಾಕ್' ಚಿತ್ರದಲ್ಲಿ ಆ್ಯಸಿಡ್ ದಾಳಿಗೆ ತುತ್ತಾದ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಇತ್ತೀಚೆಗೆ ಪೋಸ್ಟರ್ ರಿಲೀಜ್ ಮಾಡಿತ್ತು. ಚಿತ್ರದಲ್ಲಿ ದೀಪಿಕಾ, ನಟ ವಿಕ್ರಾಂತ್ ಮೆಸ್ಸಿಯೊಂದಿಗೆ ಲಿಪ್ಲಾಕ್ ಮಾಡಿರುವ ವಿಡಿಯೋ ಇದೀಗ ಸೋರಿಕೆಯಾಗಿದೆ. ವಿಕ್ರಾಂತ್ ಅವರ ಡಿಪ್ಪಿಗೆ ಅಪ್ಪಿ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು 33 ವರ್ಷದ ದೀಪಿಕಾ ಈ ಚಿತ್ರದಲ್ಲಿ ಶಾಲಾ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೇಘನಾ ಗುಲ್ಝಾರ್ ಆ್ಯಕ್ಷನ್ ಕಟ್ ಹೇಳಿದ್ದು, ಇದು ಆ್ಯಸಿಡ್ ಸಂತ್ರಸ್ತೆ, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರ. ಸದ್ಯ ಚಿತ್ರತಂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಶೂಟಿಂಗ್ ನಡೆಸುತ್ತಿದೆ.