ಕರ್ನಾಟಕ

karnataka

ETV Bharat / sitara

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ: ದೀಪಿಕಾಗೆ ಕ್ರಿಸ್ಟಲ್ ಪ್ರಶಸ್ತಿ ಗೌರವ - ದೀಪಿಕಾಗೆ ಕ್ರಿಸ್ಟಲ್ ಪ್ರಶಸ್ತಿ ಗೌರವ

ದೀಪಿಕಾ ಕೂಡಾ ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಆದರೆ ಆ ಡಿಪ್ರೆಷನ್​​​ನಿಂದ ಹೊರಬಂದ ನಂತರ ತನ್ನಂತೆ ಮಾನಸಿಕ ಖಿನ್ನತೆಗೆ ಒಳಗಾಗಿ ಬಳಲುವವರಿಗಾಗಿ ಸಹಾಯ ಮಾಡುವ ಉದ್ದೇಶದಿಂದ 2015 ರಲ್ಲಿ 'ಲೀವ್​​ ಲವ್​ ಲಾಫ್​' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕೆಲಸ ಮಾಡಲು ಆರಂಭಿಸಿದ್ದರು.

Deepika
ದೀಪಿಕಾ

By

Published : Jan 22, 2020, 8:02 AM IST

ದಾವೋಸ್(ಸ್ವಿಟ್ಜರ್ಲೆಂಡ್‌):ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾ ಜನವರಿ 10 ರಂದು ಬಿಡುಗಡೆಯಾಗಿದ್ದು ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಂದೆಡೆ 'ಚಪಾಕ್' ಸಕ್ಸಸ್​ ಖುಷಿಯಲ್ಲಿರುವ ದೀಪಿಕಾಗೆ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ 'ಕ್ರಿಸ್ಟಲ್ ಪ್ರಶಸ್ತಿ' ಲಭಿಸಿದೆ.

ದೀಪಿಕಾ ಕೂಡಾ ತಮ್ಮ ಜೀವನದಲ್ಲಿ ನಡೆದ ಕೆಲವೊಂದು ಘಟನೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಆದರೆ ಆ ಡಿಪ್ರೆಷನ್​​​ನಿಂದ ಹೊರಬಂದ ನಂತರ ತನ್ನಂತೆ ಮಾನಸಿಕವಾಗಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಉದ್ದೇಶದಿಂದ 2015 ರಲ್ಲಿ 'ಲೀವ್​​ ಲವ್​ ಲಾಫ್​' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಸೇವೆ ಆರಂಭಿಸಿದ್ದರು.

ದೀಪಿಕಾ ಪಡುಕೋಣೆ

ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾ ಹೇಳಿದ್ದೇನು?

ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ದೀಪಿಕಾ, ತಾವು ಮಾನಸಿಕ ಖಿನ್ನತೆಗೆ ಒಳಗಾದಾಗ ಆ್ಯಕ್ಟಿಂಗ್ ಕರಿಯರ್​​​​ ಬಿಡುವ ಸ್ಥಿತಿಯಲ್ಲಿದ್ದಂತೆ. ಆದರೆ ತಾಯಿ ಆ ನನ್ನನ್ನು ಖಿನ್ನತೆಯಿಂದ ಹೊರತರಲು ಏನೆಲ್ಲಾ ಪ್ರಯತ್ನ ಮಾಡಿದರು ಎಂದು ಅವರು ಹೇಳಿಕೊಂಡಿದ್ದಾರೆ. 'ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಎಂಬುದು ದೊಡ್ಡ ಸವಾಲಾಗಿದೆ. ಆದರೆ ಆ ಸಮಸ್ಯೆಯಿಂದ ನಾನು ಸಾಕಷ್ಟು ಪಾಠ ಕಲಿತಿದ್ದೇನೆ. ಮಾನಸಿಕ ಖಿನ್ನತೆಯಿಂದಲೇ ಎಷ್ಟೋ ಮಂದಿ ಆತ್ಮಹತ್ಯೆ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಪ್ರಪಂಚದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ನೀವೊಬ್ಬರೇ ಅಲ್ಲ, ಹಾಗೆ ನೀವು ಖಂಡಿತ ಒಂಟಿಯಲ್ಲ, ಜೀವನದಲ್ಲಿ ಭರವಸೆ ಇರಬೇಕು. ಆಗಲೇ ಎಲ್ಲವನ್ನೂ ಗೆಲ್ಲಲು ಸಾಧ್ಯ' ಎಂದು ವೇದಿಕೆ ಮೇಲೆ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ABOUT THE AUTHOR

...view details