ಕನ್ನಡದ ಸಾಕಷ್ಟು ಸಿನಿಮಾಗಳು ಬೇರೆ ಭಾಷೆಗೆ ರೀಮೇಕ್ ಆಗಿವೆ. ಅದೇ ರೀತಿ ಇತರ ಭಾಷೆಗಳ ಚಿತ್ರಗಳು ಕೂಡಾ ಕನ್ನಡಕ್ಕೆ ರೀಮೇಕ್ ಆಗಿದೆ. ಹೀಗೆ ರೀಮೇಕ್ ಆಗಿರುವ ಸಿನಿಮಾಗಳಲ್ಲಿ 'ಬುಲ್ ಬುಲ್' ಕೂಡಾ ಒಂದು. ತೆಲುಗಿನ ಪ್ರಭಾಸ್ ಅಭಿನಯದ 'ಡಾರ್ಲಿಂಗ್' ಚಿತ್ರವನ್ನು ಕನ್ನಡದಲ್ಲಿ 'ಬುಲ್ ಬುಲ್' ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು.
ಹಿಂದಿ ಚಿತ್ರಕ್ಕೆ ದರ್ಶನ್ ಸಿನಿಮಾ ಹೆಸರು..ಖ್ಯಾತ ಬಾಲಿವುಡ್ ನಟಿ ನಿರ್ಮಿಸಿರುವ ಚಿತ್ರ ಇದು..! - Anushka sharma production Bulbbul film
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಸಿನಿಮಾ ಹೆಸರನ್ನು ಅನುಷ್ಕಾ ಶರ್ಮ ತಮ್ಮ ನಿರ್ಮಾಣದ ಹಿಂದಿ ಚಿತ್ರಕ್ಕೆ ಇಟ್ಟಿದ್ದಾರೆ. ಇದು ಹಾರರ್ ಸಿನಿಮಾವಾಗಿದ್ದು ಜೂನ್ 24 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
ಇದೀಗ ಹಿಂದಿಯ ಸಿನಿಮಾಗೆ 'ಬುಲ್ ಬುಲ್' ಎಂದು ಹೆಸರಿಟ್ಟಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. 'ಡಾರ್ಲಿಂಗ್' ಸಿನಿಮಾವನ್ನು 'ಬುಲ್ ಬುಲ್' ಹೆಸರಿನಲ್ಲಿ ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ ನಿಜ ವಿಚಾರ ಅದಲ್ಲ. ಅನುಷ್ಕಾ ಶರ್ಮ ನಿರ್ಮಾಣದ ಸಿನಿಮಾವೊಂದು 'ಬುಲ್ ಬುಲ್' ಹೆಸರಿನಲ್ಲಿ ತಯಾರಾಗಿದ್ದು ಈ ಚಿತ್ರದ ಫಸ್ಟ್ಲುಕ್ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.
ಆದರೆ ಇದು ಹಾರರ್ ಸಿನಿಮಾ. ಆ್ಯಕ್ಟಿಂಗ್ ಮಾತ್ರವಲ್ಲ ಸಿನಿಮಾ ನಿರ್ಮಾಣದಲ್ಲೂ ಮುಂದಿರುವ ಅನುಷ್ಕಾ ತಮ್ಮ ಕ್ಲೀನ್ ಸ್ಲೇಟ್ ಫಿಲ್ಮ್ ಬ್ಯಾನರ್ ಅಡಿ 'ಬುಲ್ ಬುಲ್' ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅವಿನಾಶ್ ತ್ರಿಪಾಠಿ, ರಾಹುಲ್ ಬೋಸ್ ಹಾಗೂ ಇನ್ನಿತರರು ನಟಿಸಿದ್ದಾರೆ. ಜೂನ್ 24 ರಂದು ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.