ಕರ್ನಾಟಕ

karnataka

ETV Bharat / sitara

ಹೃದಯ ವೈಶಾಲ್ಯತೆ ಮೆರೆದ ಸಲ್ಲು: ಸಹನಟನಿಗೆ ಭಾಯ್​ ಜಾನ್​ನಿಂದ ಹೀಗೊಂದು ಸಹಾಯ! - ದಬಾಂಗ್ ಚಿತ್ರದ ಸಹನಟ

ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ದಬಾಂಗ್ ಚಿತ್ರದ ಸಹನಟನ ಚಿಕಿತ್ಸಾ ವೆಚ್ಚ ಭರಿಸಿದ ಸಲ್ಮಾನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಲ್ಮಾನ್ ಖಾನ್

By

Published : Aug 8, 2019, 11:46 AM IST

ಮುಂಬೈ: ಬಾಲಿವುಡ್ ಬ್ಯಾಡ್​ ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ಕಷ್ಟ ಕಾಲದಲ್ಲಿ ಸಹ ನಟನ ಸಹಾಯಕ್ಕೆ ಧಾವಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಹೃದಯಾಘಾತದಿಂದ ಚಿಕಿತ್ಸೆ ಪಡೆಯುತಿದ್ದ ದಬಾಂಗ್ ಚಿತ್ರದ ಸಹನಟ ದಾದಿ ಪಾಂಡೆ ಅವರ ಚಿಕಿತ್ಸಾ ವೆಚ್ಚ ಭರಿಸಿದ ಸಲ್ಮಾನ್ ಖಾನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಾದಿ ಪಾಂಡೆ

ಕಳೆದ 2 ತಿಂಗಳ ಹಿಂದೆ ದಾದಿ ಪಾಂಡೆಗೆ ಹೃದಯಾಘಾತವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಮತ್ತೊಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ದಾದಿ ಪಾಂಡೆಗೆ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಸಹ ನಟನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡ ಸಲ್ಮಾನ್​ ಖಾನ್ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ದಾದಿ ಪಾಂಡೆ, ಸಲ್ಲು ನಿಜಕ್ಕೂ ಹೃದಯವಂತ. ಅವರಿಗೆ ಎಷ್ಟು ಧನ್ಯವಾದ ತಿಳಿಸಿದ್ರೂ ಸಾಲದು ಎಂದಿದ್ದಾರೆ.

ABOUT THE AUTHOR

...view details