ಕರ್ನಾಟಕ

karnataka

ETV Bharat / sitara

ದಬಾಂಗ್​​ 3 ಮೇಕಿಂಗ್ ವಿಡಿಯೋ ಬಿಡುಗಡೆ: ಸಲ್ಮಾನ್ ಬಗ್ಗೆ ಕಿಚ್ಚ ಏನು ಹೇಳಿದ್ದಾರೆ? - ದಬಾಂಗ್​ 3 ಮೇಕಿಂಗ್ ವಿಡಿಯೋ ಬಿಡುಗಡೆ

ಮೇಕಿಂಗ್ ವಿಡಿಯೋದಲ್ಲಿ ಮಾತನಾಡಿರುವ ಕಿಚ್ಚ, ಸಲ್ಮಾನ್​ ಖಾನ್ ಅವರನ್ನು ಹೊಗಳಿದ್ದಾರೆ. 'ಸಲ್ಮಾನ್ ಖಾನ್ ಬಹಳ ಸರಳ ವ್ಯಕ್ತಿ. ಅವರು ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಾರೆ. ಆದ್ದರಿಂದ ಅವರೆಂದರೆ ಎಲ್ಲರಿಗೂ ಇಷ್ಟ' ಎಂದಿದ್ದಾರೆ.

ದಬಾಂಗ್​​ 3

By

Published : Nov 9, 2019, 11:14 PM IST

ಪ್ರಭುದೇವ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಬಾಂಗ್​​​-3 ಸಿನಿಮಾ ಡಿಸೆಂಬರ್​​ 20 ರಂದು ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಚಿತ್ರತಂಡ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿ ಇದೆ.ಇತ್ತೀಚೆಗಷ್ಟೇ ಚಿತ್ರತಂಡ ದಬಾಂಗ್​​-3 ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಕೂಡಾ ಮಾತನಾಡಿದ್ದಾರೆ. ಅವರೊಂದಿಗೆ ಪ್ರಭುದೇವ, ನಾಯಕಿ ಸೋನಾಕ್ಷಿ ಸಿನ್ಹ ಕೂಡಾ ಮಾತನಾಡಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ 'ಚುಲ್​ಬುಲ್ ಪಾಂಡೆ' ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ, ಕಿಚ್ಚ ಸುದೀಪ್ 'ಬಲ್ಲಿ' ಎಂಬ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕಿಚ್ಚನ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಮೇಕಿಂಗ್ ವಿಡಿಯೋದಲ್ಲಿ ಮಾತನಾಡಿರುವ ಕಿಚ್ಚ, ಸಲ್ಮಾನ್​ ಖಾನ್ ಅವರನ್ನು ಹೊಗಳಿದ್ದಾರೆ. 'ಸಲ್ಮಾನ್ ಖಾನ್ ಬಹಳ ಸರಳ ವ್ಯಕ್ತಿ, ಅವರು ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಾರೆ ಆದ್ದರಿಂದ ಅವರೆಂದರೆ ಎಲ್ಲರಿಗೂ ಇಷ್ಟ' ಎಂದಿದ್ದಾರೆ.

ಇನ್ನು ಪ್ರಭುದೇವ ಕೂಡಾ ಮಾತನಾಡಿದ್ದು ಶೂಟಿಂಗ್ ವೇಳೆ ನಡೆದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕಿಚ್ಚ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿರುವುದು ವಿಶೇಷ.

ABOUT THE AUTHOR

...view details