ಕರ್ನಾಟಕ

karnataka

ETV Bharat / sitara

ತೌಕ್ತೆ ಚಂಡಮಾರುತ.. ಮನೆಯಲ್ಲೇ ಇರಿ ಎಂದು ಅಭಿಮಾನಿಗಳಿಗೆ ಬಿಗ್​ಬಿ, ಕರೀನಾ, ಕಾರ್ತಿಕ್​ ಆರ್ಯನ್​ ಮನವಿ - ತೌಕ್ತೆ ಚಂಡಮಾರುತದ ಬಗ್ಗೆ ಕಾರ್ತಿಕ್​ ಆರ್ಯನ್​ ಟ್ವೀಟ್​

ತೌಕ್ತೆ ಚಂಡಮಾರುತ ಮುಂಬೈ ಗುಜರಾತ್​ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಾನಿ ಮಾಡುತ್ತಿರುವ ಹಿನ್ನೆಲೆ ಬಾಲಿವುಡ್ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಸಾರ್ವಜನಿಕಿಗೆ ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ. ಅಮಿತಾಬ್ ಬಚ್ಚನ್‌ನಿಂದ ಕಾರ್ತಿಕ್ ಆರ್ಯನ್‌ವರೆಗೆ ಬಾಲಿವುಡ್​ ಹಲವಾರು ನಟ -ನಟಿಯರು ಜನರನ್ನು ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ ಎಂದು ವಿನಂತಿಸಿಕೊಂಡಿದ್ದಾರೆ..

bollywood
bollywood

By

Published : May 17, 2021, 3:51 PM IST

ಮುಂಬೈ: ತೌಕ್ತೆ ಚಂಡಮಾರುತ ಹಿನ್ನೆಲೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಕರೀನಾ ಕಪೂರ್, ಕಾರ್ತಿಕ್ ಆರ್ಯನ್, ಮಲೈಕಾ ಅರೋರಾ ಮತ್ತು ಇತರರು ಮುಂಬೈ ಜನರನ್ನು ಮನೆಯೊಳಗೆ ಇರಬೇಕೆಂದು ಮನವಿ ಮಾಡಿದ್ದಾರೆ.‘

ಭಾನುವಾರದಿಂದ ಈ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಬಿರುಗಾಳಿ, ಗುಡುಗು,ಸಿಡಿಲು ಸಹಿತ ಮಳೆಯಾಗುತ್ತಿದ್ದು, ಅಪಾರ ಹಾನಿಯುಂಟಾಗಿದೆ.

ಹೀಗಾಗಿ, ಚಂಡಮಾರುತದ ತೀವ್ರತರ ಪರಿಣಾಮಗಳ ಬಗ್ಗೆ ಎಚ್ಚರಿಸಿರುವ ಬಿಗ್​ಬಿ ಅಮಿತಾಬ್​ ಬಚ್ಚನ್​,''ಟಿ 3905-# ಚಂಡಮಾರುತದ ಪರಿಣಾಮಗಳು ಪ್ರಾರಂಭವಾಗಿವೆ.. ಮುಂಬೈನಲ್ಲಿ ಮಳೆ.. ದಯವಿಟ್ಟು ಸುರಕ್ಷಿತವಾಗಿರ'' ಎಂದು ಬರೆದುಕೊಂಡಿದ್ದಾರೆ.

ಕರೀನಾ ಕಪೂರ್ ಖಾನ್ ಮತ್ತು ಅವರ ಆತ್ಮೀಯ ಗೆಳತಿ ಮಲೈಕಾ ಅರೋರಾ ಅವರು ಬಿಎಂಸಿಯ ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು ಎಲ್ಲರೂ ಮನೆಯಲ್ಲಿಯೇ ಇರಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಕರೀನಾ ಬಿಎಂಸಿಯ ಪೋಸ್ಟ್‌ಗೆ 'ಘರ್ ಪೆ ರಹೋ' ಸ್ಟಿಕ್ಕರ್ ಸೇರಿಸಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗೆ ಹಂಚಿಕೊಂಡಿದ್ದಾರೆ. ಮಲೈಕಾ ಕೂಡ ಇದೇ ಪೋಸ್ಟ್ ಹಂಚಿಕೊಂಡಿದ್ದು, ಗಾಳಿ ಮತ್ತು ಮಳೆಯ ಮಧ್ಯೆ ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.

ನಟ ಕಾರ್ತಿಕ್ ಆರ್ಯನ್ ತಮ್ಮ ಥ್ರೋಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡಿ, ಒಳಗೆ ಉಳಿಯಲು ಇನ್ನೊಂದು ಕಾರಣ ತೌಕ್ತೆ '' ಎಂದು ಬರೆದಿದ್ದಾರೆ. ಅದೇ ರೀತಿ ನಟಿ ಡಯಾನಾ ಟ್ವೀಟ್ ಮಾಡಿ '' ಎಲ್ಲರೂ ಸುರಕ್ಷಿವಾಗಿ ಮುಂಬೈನಲ್ಲಿದ್ದಾರೆ ಎಂದು ಭಾವಿಸುತ್ತೇವೆ. ದಯವಿಟ್ಟು ಮನೆಯಲ್ಲಿಯೇ ಇರಿ ಮತ್ತು ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details