ಹೈದರಾಬಾದ್: ಮಹಾರಾಷ್ಟ್ರದಲ್ಲಿ ಕೊರೊನಾ ಅಲೆಯಿಂದಾಗಿ ರಾಜ್ಯದಲ್ಲಿ ಮೇ 1ರ ತನಕ ಕಠಿಣ ಲಾಕ್ಡೌನ್ ಜಾರಿಗೆ ತರಲಿದೆ. ಇನ್ನೊಂದೆಡೆ ಕರ್ಫ್ಯೂ ಜಾರಿಯಾಗಿರುವುದರಿಂದ ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.
ಹೊಸ ಮಾರ್ಗಸೂಚಿ ಅನ್ವಯ ಸಿನಿಮಾ, ಧಾರಾವಾಹಿ, ಜಾಹೀರಾತು ಚಿತ್ರೀಕರಣ ನಿಷೇಧಗೊಂಡಿದೆ. ಇದರಿಂದಾಗಿ ದೊಡ್ಡ ನಟರು ಶೂಟಿಂಗ್ನಿಂದ ದೂರ ಉಳಿಯಲಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ‘ಪಠಾಣ್’, ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟೈಗರ್-3’, ಪ್ರಭಾಸ್ ನಟನೆಯ ‘ಆದಿಪುರುಷ್’ ಸೇರಿ ‘ಡೋಂಗ್ರಿ ಟು ದುಬೈ’ ವೆಬ್ ಸೀರಿಸ್ ಚಿತ್ರೀಕರಣ ಬಂದ್ ಆಗಿದೆ.
ವರದಿಗಳ ಪ್ರಕಾರ, ಪಠಾಣ್ ಸಿನಿಮಾ ಸೆಟ್ನಲ್ಲಿದ್ದ ಕೆಲ ಸಿಬ್ಬಂದಿಗೆ ಕೊರೊನಾ ಕಂಡು ಬಂದಿದ್ದು, ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿದೆ. ಬಳಿಕ ಶಾರುಖ್ ಖಾನ್ ಸಹ ಕ್ವಾರಂಟೈನ್ಗೆ ಒಳಗಾಗಿದ್ದರು ಎಂಬ ಸುದ್ದಿ ಹರಿದಾಡಿತು. ಇದಕ್ಕೆ ಸ್ಪಷ್ಟನೆ ನೀಡಿದ ಚಿತ್ರತಂಡ, ಏಪ್ರಿಲ್ 13 ಮತ್ತು 14ಕ್ಕೆ ಮೊದಲೇ ನಿಗದಿಯಾಗಿರುವಂತೆ ವಿರಾಮ ನೀಡಲಾಗಿತ್ತು. 15 ದಿನಗಳ ಬಳಿಕ ಪುನಃ ಚಿತ್ರೀಕರಣ ಆರಂಭಿಸಲಾಗುವುದು ಎಂದಿದ್ದಾರೆ.
ಇತ್ತ ಸಲ್ಮಾನ್ ನಟನೆಯ ಟೈಗರ್-3 ಹಾಗೂ ಪ್ರಭಾಸ್ ನಟನೆಯ ಆದಿಪುರುಷ ಚಿತ್ರೀಕರಣ ಸಹ ಸ್ಥಗಿತಗೊಂಡಿದೆ.