ಕರ್ನಾಟಕ

karnataka

ETV Bharat / sitara

ಭೂಮಿಗೆ ನೆಗೆಟಿವ್​.. ಅರ್ಜುನ್​ಗೆ ಪಾಸಿಟಿವ್​ - ಭೂಮಿಗೆ ನೆಗೆಟಿವ್

ಬಾಲಿವುಡ್​ ನಟ ಅರ್ಜುನ್​ ರಾಂಪಾಲ್​ ತಮಗೆ ಕೋವಿಡ್​ ತಗುಲಿರುವುದಾಗಿ ಟ್ವೀಟ್​ ಮಾಡಿ ದೃಢಪಡಿಸಿದ್ದಾರೆ.

Bhumi Pednekar recovers while Arjun Rampal tests positive
ಭೂಮಿಗೆ ನೆಗಟಿವ್​.. ಅರ್ಜುನ್​ಗೆ ಪಾಸಿಟಿವ್​

By

Published : Apr 18, 2021, 12:01 PM IST

ಮುಂಬೈ:ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ವರದಿ ಇದೀಗ ನೆಗೆಟಿವ್​ ಬಂದಿದ್ದು, ಇತ್ತ ನಟ ಅರ್ಜುನ್​ ರಾಂಪಾಲ್​ ವರದಿ ಪಾಸಿಟಿವ್​ ಆಗಿದೆ.

ಟ್ವೀಟ್​ ಮಾಡಿ ಸ್ಪಷ್ಟಪಡಿಸಿರುವ ಅರ್ಜುನ್​ ರಾಂಪಾಲ್, "ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ಸಹ ಹೋಂ ಕ್ವಾರಂಟೈನ್​ಗೆ ಒಳಗಾಗಿರುವೆ. ಅಗತ್ಯವಿರುವ ವೈದ್ಯಕೀಯ ಸಲಹೆ ಪಡೆಯುತ್ತಿರುವೆ.

ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ" ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ವಿಧಿವಶ

"ಇದು ನಮಗೆ ತುಂಬಾ ಭಯಾನಕ ಸಮಯವಾಗಿದೆ. ಆದರೆ ಈ ಅಲ್ಪಾವಧಿಯಲ್ಲಿ ನಾವು ಜಾಗೃತರಾಗಿ, ಬುದ್ಧಿವಂತಿಕೆ ತೋರಿಸಿದರೆ ಅದು ದೀರ್ಘಕಾಲದ ಪ್ರಯೋಜನಗಳನ್ನು ನೀಡುತ್ತದೆ. ಜೊತೆಯಾಗಿ ನಾವು ಕೊರೊನಾ ವಿರುದ್ಧ ಹೋರಾಡೋಣ" ಎಂದು ನಟ ಟ್ವೀಟ್​ ಮಾಡಿದ್ದಾರೆ.

ಏಪ್ರಿಲ್​ 5ರಂದು ಕೊರೊನಾ ತಗುಲಿರುವುದಾಗಿ ತಿಳಿಸಿದ್ದ ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ಇದೀಗ ಸೋಂಕಿನಿಂದ ಗುಣಮುಖರಾಗಿರುವುದಾಗಿ ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details