ಕರ್ನಾಟಕ

karnataka

ETV Bharat / sitara

ಬಾಲಿವುಡ್​​ ಖ್ಯಾತ ಕೊರಿಯೋಗ್ರಾಫರ್​​ ವಿರುದ್ಧ ಜಾಮೀನು ರಹಿತ ವಾರೆಂಟ್​​​​... ಕಾರಣ ಏನು? - ಕೊರಿಯೋಗ್ರಾಫರ್ ರೆಮೋ ಡಿಸೋಜ ವಿರುದ್ಧ ಜಾಮೀನು ರಹಿತ ವಾರೆಂಟ್

'ಅಮರ್ ಮಸ್ಟ್ ಡೈ' ಸಿನಿಮಾಗಾಗಿ ರೆಮೋ ಡಿಸೋಜಾ ನನ್ನ ಬಳಿ 5 ಕೋಟಿ ರೂಪಾಯಿ ಪಡೆದಿದ್ದರು. ಸಿನಿಮಾ ಬಿಡುಗಡೆಯಾದ ಮೇಲೆ ಎರಡರಷ್ಟು ಹಣ ನೀಡುವುದಾಗಿ ನಂಬಿಸಿ ಇದೀಗ ಮೋಸ ಮಾಡಿದ್ದಾರೆ ಎಂದು ಸತ್ಯೇಂದ್ರ ತ್ಯಾಗಿ ಎಂಬುವವರು ದೂರು ನೀಡಿದ್ದಾರೆ.

ರೆಮೋ ಡಿಸೋಜ

By

Published : Oct 23, 2019, 6:34 PM IST

ವಂಚನೆ ಪ್ರಕರಣದ ಆರೋಪದ ಮೇಲೆ ಬಾಲಿವುಡ್​​ನ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾ ವಿರುದ್ಧ ಉತ್ತರಪ್ರದೇಶದ ಗಾಜಿಯಾಬಾದ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ರೆಮೋ ಡಿಸೋಜ

ಗಾಜಿಯಾಬಾದ್​ನ ಸತ್ಯೇಂದ್ರ ತ್ಯಾಗಿ ಎಂಬುವವರು ರೆಮೋ ವಿರುದ್ಧ ದೂರು ನೀಡಿದ್ದು, 2016 ರಲ್ಲಿ 'ಅಮರ್ ಮಸ್ಟ್ ಡೈ' ಸಿನಿಮಾಗಾಗಿ ರೆಮೋ ಡಿಸೋಜಾ ನನ್ನ ಬಳಿ 5 ಕೋಟಿ ರೂಪಾಯಿ ಪಡೆದಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಸಿನಿಮಾ ಬಿಡುಗಡೆಯಾದ ನಂತರ ಪಡೆದುಕೊಂಡ ಹಣಕ್ಕೆ ಹೆಚ್ಚುವರಿ 5 ಕೋಟಿ ರೂಪಾಯಿ ಸೇರಿಸಿ 10 ಕೋಟಿ ರೂಪಾಯಿಯನ್ನು ವಾಪಸ್​ ಕೊಡುವುದಾಗಿ ರೆಮೋ ಪ್ರಾಮಿಸ್ ಮಾಡಿದ್ದರು. ಆದರೆ ಇದುವರೆಗೂ ಹಣ ವಾಪಸ್ ನೀಡಿಲ್ಲ ಎಂದು ಸತ್ಯೇಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರೆಮೋ ಡಿಸೋಜಾ ವಿಚಾರಣೆಗೆ ಕೋರ್ಟಿಗೆ ಹಾಜರಾಗದ ಕಾರಣ ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ಎಸ್​​ಪಿ ಅತೀಶ್ ಕುಮಾರ್ ಹೇಳಿದ್ದಾರೆ.

ಖ್ಯಾತ ಕೊರಿಯೋಗ್ರಾಫರ್​ ರೆಮೋ ಡಿಸೋಜ

ರೆಮೋ ಡಿಸೋಜಾ ಬಾಲಿವುಡ್​ನಲ್ಲಿ ಕೊರಿಯೋಗ್ರಾಫರ್ ಆಗಿ ಖ್ಯಾತರಾಗಿದ್ದಾರೆ. ಚಿತ್ರ ನಿರ್ದೇಶನಕ್ಕೂ ಇಳಿದ ರೆಮೋ, ಎಬಿಸಿಡಿ 2, ಎ ಫ್ಲೈಯಿಂಗ್ ಜೆಟ್, ಸಲ್ಮಾನ್ ಖಾನ್ ಅಭಿನಯದ ರೇಸ್ 3 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದ್ಯಕ್ಕೆ ಅವರು ವರುಣ್ ಧವನ್, ಶ್ರದ್ಧಾ ಕಪೂರ್ ಹಾಗೂ ನೊರಾ ಫತೇರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ಟ್ರೀಟ್ ಡ್ಯಾನ್ಸರ್ ಭಾಗ 3 ಚಿತ್ರ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ.

For All Latest Updates

TAGGED:

ABOUT THE AUTHOR

...view details