ಮುಂಬೈ: ಕೊರೊನಾದಿಂದಾಗಿ ಬಾಲಿವುಡ್ ಸೇರಿ ಎಲ್ಲಾ ಸಿನಿಮಾ ರಂಗಕ್ಕೂ ಕೊಂಚ ಬಿಡುವು ಸಿಕ್ಕಂತಾಗಿದೆ. ಇಡೀ ದಿನ ಶೂಟಿಂಗ್ನಲ್ಲಿ ಕಾಲ ಕಳೆಯುತ್ತಿದ್ದ ನಟ-ನಟಿಯರು ಸದ್ಯ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ನಡುವೆ ಬಾಲಿವುಡ್ನ ಯಂಗ್ ಹ್ಯಾಂಡ್ಸಮ್ ಹಂಕ್ ಟೈಗರ್ ಶ್ರಾಫ್ ಮನೆಯಲ್ಲಿಯೇ ಫುಟ್ಬಾಲ್ ಆಡಿ ಆ್ಯಕ್ವೀವ್ ಆಗಿರಲು ಟಿಪ್ಸ್ ನೀಡಿದ್ದಾರೆ.
ಕೊರೊನಾ ಎಫೆಕ್ಟ್.. ಮನೆಯಲ್ಲಿಯೇ ಟೈಗರ್ ಶ್ರಾಫ್ ವರ್ಕ್ಔಟ್..
ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಟೈಗರ್ ಶ್ರಾಫ್, ಖಾಲಿ ಸಮಯದಲ್ಲಿ ಆ್ಯಕ್ವೀವ್ ಆಗಿರಲು ಡ್ರಾಯಿಂಗ್ ರೂಮ್ನಲ್ಲಿ ಫುಟ್ಬಾಲ್ ಆಡಿದರಲ್ಲದೆ, ಸಂಜೆ ವೇಳೆ ಮನೆಯ ಟೆರೇಸ್ ಮೇಲೆ ವರ್ಕ್ಔಟ್ ಸಹ ಮಾಡಿದ್ದಾರೆ.
ಭಾಘಿ-3 ಸಿನಿಮಾ ಸಕ್ಸ್ಸ್ನಲ್ಲಿ ತೇಲುತ್ತಿರುವ ನಟ ಟೈಗರ್ ಶ್ರಾಫ್ ಸದ್ಯ ಮನೆಯಲ್ಲಿಯೇ ಜಾಲಿ ಮೂಡ್ನಲ್ಲಿದ್ದಾರೆ. ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಟೈಗರ್ ಶ್ರಾಫ್, ಖಾಲಿ ಸಮಯದಲ್ಲಿ ಆ್ಯಕ್ವೀವ್ ಆಗಿರಲು ಡ್ರಾಯಿಂಗ್ ರೂಮ್ನಲ್ಲಿ ಫುಟ್ಬಾಲ್ ಆಡಿದರಲ್ಲದೆ, ಸಂಜೆ ವೇಳೆ ಮನೆಯ ಟೆರೇಸ್ ಮೇಲೆ ವರ್ಕ್ಔಟ್ ಸಹ ಮಾಡಿದ್ದಾರೆ.
ಹಾಗೇ ತಮ್ಮ ಬಾಲ್ಯದ ನೆನಪನ್ನೂ ಹಂಚಿಕೊಂಡಿರುವ ಟೈಗರ್, 'ನಾವು ಚಿಕ್ಕವರಿದ್ದಾಗ ನನ್ನ ತಾಯಿ ಮನೆಯಲ್ಲಿ ಆಡಲು ಎಂದಿಗೂ ಬಿಡುತ್ತಿರಲಿಲ್ಲ. ಆದರೆ, ಈಗ ಆಕೆಗೆ ಬೇರೆ ಆಯ್ಕೆಯೇ ಇಲ್ಲ' ಅಂತಾ ಬರೆದುಕೊಂಡಿದ್ದಾರೆ.