ಮುಂಬೈ : ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಶಿವಸೇನೆಯ ನಡುವಿನ ಶೀತಲ ಸಮರ ಮುಂದುವರೆದಿದೆ. ಮಹಾರಾಷ್ಟ್ರ ಸರ್ಕಾರದ ವಿರುದ್ದ ಪದೇಪದೆ ಹೇಳಿಕೆ ನೀಡುವ ಕಂಗನಾಗೆ ಸಿಎಂ ಉದ್ದವ್ ಠಾಕ್ರೆ ತಿರುಗೇಟು ನೀಡಿದ್ದಾರೆ.
ಕಂಗನಾಗೆ ಠಾಕ್ರೆ ಟಾಕ್‌ಏಟು.. ಮಹಾ ಸಿಎಂಗೆ ನಟಿಮಣಿಯಿಂದ ಟ್ವಿಟೇಟು.. - ನಟಿ ಕಂಗನಾ ರಣಾವತ್ ಟ್ವೀಟ್ ವಾರ್
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ವಾಗ್ವಾದ ಮುಂದುವರೆದಿದ್ದು, ದಸರಾ ಕಾರ್ಯಕ್ರಮಲ್ಲಿ ಕಂಗನಾ ಕುರಿತು ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ, ಟ್ವೀಟ್ ಮೇಲೆ ಟ್ವೀಟ್ ಮಾಡಿ ಕಂಗನಾ ತಿರುಗೇಟು ನೀಡಿದ್ದಾರೆ..
![ಕಂಗನಾಗೆ ಠಾಕ್ರೆ ಟಾಕ್‌ಏಟು.. ಮಹಾ ಸಿಎಂಗೆ ನಟಿಮಣಿಯಿಂದ ಟ್ವಿಟೇಟು.. Continued Cold War between Shiv Sena-Kangana Ranaut](https://etvbharatimages.akamaized.net/etvbharat/prod-images/768-512-9316500-577-9316500-1603720399636.jpg)
ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿ ಸಿಎಂ ಉದ್ದವ್ ಠಾಕ್ರೆ, ಬ್ರೆಡ್, ಬಟರ್ಗೋಸ್ಕರ ಮುಂಬೈಗೆ ಬಂದ ಕೆಲವರು, ಈಗ ನಗರವನ್ನು ಪಾಕ್ ಆಕ್ರಮಿತ ಕಾಶ್ಮಿರಕ್ಕೆ ಹೋಲಿಸುತ್ತಿದ್ದಾರೆ ಎಂದಿದ್ದಾರೆ. ಕಂಗನಾ ತವರು ರಾಜ್ಯ ಹಿಮಾಚಲ ಪ್ರದೇಶವನ್ನು ಉಲ್ಲೇಖಿಸಿ ಮಾತನಾಡಿದ ಠಾಕ್ರೆ, ನಮ್ಮ ಮನೆಯಲ್ಲಿ ನಾವು ತುಳಸಿ ಬೆಳೆಯುತ್ತೇವೆ, ಗಾಂಜಾ ಬೆಳೆಯುವುದಿಲ್ಲ. ಗಾಂಜಾ ಬೆಳೆಯುವುದು ನಿಮ್ಮ ರಾಜ್ಯದಲ್ಲಿ ಎಂದು ಹೇಳಿದ್ದಾರೆ.
ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ, ಮುಖ್ಯಮಂತ್ರಿ ಬಹಳ ಸಣ್ಣ ವ್ಯಕ್ತಿ ಎಂದಿದ್ದು, ಮುಖ್ಯಮಂತ್ತಿ ಎಂದರೆ ಜನರ ಸೇವಕ. ಆದರೆ, ನೀವು ಸಣ್ಣ ಪುಟ್ಟ ವಿಷಯಗಳಿಗೆ ಜಗಳವಾಡುವ ಮೂಲಕ ನಿಮಗೆ ನೀವೇ ಅವಮಾಡಿಕೊಳ್ಳುತ್ತಿದ್ದೀರ. ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳದ ಜನರನ್ನು ಅವಮಾನಿಸಿ, ಕೊಳಕು ರಾಜಕೀಯ ಮಾಡುವ ಮೂಲಕ ತಾವು ಸಿಎಂ ಕುರ್ಚಿಗೆ ಅರ್ಹರಲ್ಲ ಎಂಬುವುದನ್ನು ತೋರಿಸಿದ್ದೀರಿ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.