ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಸುಖೇಶ್ ಚಂದ್ರಶೇಖರ್ ಬಗ್ಗೆ ದಿನಕ್ಕೊಂದು ರೋಚಕ ಮಾಹಿತಿ ಹೊರ ಬೀಳುತ್ತಲೇ ಇದೆ. ಇದೀಗ ಈತ ಇದೇ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ಗಾಗಿ 500 ಕೋಟಿ ರೂ. ಬಜೆಟ್ ಸಿನಿಮಾ ಮಾಡಲು ಮುಂದಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಖೇಶ್ ಚಂದ್ರಶೇಖರ್ನನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸುವವರೆಗೂ ಆತನ ಹಾಗೂ ನಟಿ ಜಾಕ್ವೆಲಿನ್ ನಡುವಿನ ಸಂಬಂಧದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.
ವಿಚಾರಣೆ ವೇಳೆ ಸುಖೇಶ್ ನೀಡಿದ ಮಾಹಿತಿ ಮೇರೆಗೆ ಬಾಲಿವುಡ್ ನಟಿಯರಾದ ಜಾಕ್ವೆಲಿನ್, ನೋರಾ ಫತೇಹಿ ಅವರನ್ನು ಇಡಿ ವಿಚಾರಣೆಗೆ ಕರೆಯಿಸಿಕೊಂಡಿತ್ತು.
ದಿನದಿಂದ ದಿನಕ್ಕೆ ಜಾಕ್ವೆಲಿನ್ ಬಗ್ಗೆ ಹೊಸ ಹೊಸ ವಿಚಾರ ಬಾಯ್ಬಿಡುತ್ತಿರುವ ಸುಖೇಶ್ ಈ ಹಿಂದೆ ಆಕೆಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದರು.