ಮುಂಬೈ (ಮಹಾರಾಷ್ಟ್ರ):ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಪ್ಯಾನ್ - ಇಂಡಿಯಾ ಚಿತ್ರದಲ್ಲಿ ರಾಮ್ ಚರಣ್ ತೇಜನಿಗೆ ನಾಯಕಿಯಾಗಿ ನಟಿ ಕಿಯಾರ ಅಡ್ವಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಇಂದು ಘೋಷಿಸಿದ್ದಾರೆ. ಅಡ್ವಾಣಿ ಮತ್ತು ಚರಣ್ 2019ರ ತೆಲುಗು ಆಕ್ಷನ್ ಚಲನಚಿತ್ರ ವಿನಯ ವಿಧೇಯ ರಾಮ ನಂತರ ಈ ಸಿನೆಮಾದಲ್ಲಿ ಮತ್ತೆ ಒಂದಾಗಲಿದ್ದಾರೆ.
ನಿರ್ಮಾಪಕ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಕಿಯಾರ ಅಡ್ವಾಣಿಯ 29ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಘೋಷಣೆ ಮಾಡಿದೆ. "ಪ್ರತಿಭಾನ್ವಿತ ಸುಂದರಿ ಕಿಯಾರ ಅಡ್ವಾಣಿ ಈ ಅತ್ಯಾಕರ್ಷಕ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ" ಎಂದು #HappyBirthdayKiaraAdvani #RC15 #SVC50 ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಲಾಗಿದೆ.
ಕಿಯಾರ ಅಭಿನಯದ ಬಯೋಪಿಕ್ ಶೇರ್‌ಶಾ ಬಿಡುಗಡೆಗೆ ಸಿದ್ಧವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಮತ್ತು ಆತಂಕಕ್ಕೊಳಗಾಗಿದ್ದೇನೆ, ಚಿತ್ರೀಕರಣ ಆರಂಭಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕಿಯಾರ ಹೇಳಿದ್ದಾರೆ.