ಹೈದರಾಬಾದ್ :ಕಾಲಿವುಡ್ನ ಬ್ಲಾಕ್ಬಸ್ಟರ್, ಸೂಪರ್ ಹಿಟ್ 'ವಿಕ್ರಮ್ ವೇದಾ' ಸಿನಿಮಾ ಬಾಲಿವುಡ್ಗೆ ರಿಮೇಕ್ ಆಗುವುದು ಪಕ್ಕಾ. ಬಾಲಿವುಡ್ನಲ್ಲಿ ತಯಾರಾಗುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಟಿಸಿದ್ದ ವಿಜಯ್ ಸೇತುಪತಿ ಮತ್ತು ಆರ್.ಮಾಧವನ್ ಪಾತ್ರವನ್ನು ಈ ಇಬ್ಬರು ನಿರ್ವಹಿಸಲಿದ್ದಾರೆ.
ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಹೃತಿಕ್ ಮತ್ತು ಸೈಫ್ ವಿಕ್ರಮ್ ವೇದಾ ರಿಮೇಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎಂದಿದ್ದಾರೆ. ವಿಕ್ರಮ್ ವೇದಾ ಸಿನಿಮಾವನ್ನು ನಿರ್ದೇಶಿಸಿದ್ದ ಪುಷ್ಕರ್- ಗಾಯತ್ರಿ ಬಾಲಿವುಡ್ನ ಸಿನಿಮಾಗೂ ಆ್ಯಕ್ಷನ್-ಕಟ್ ಹೇಳಲಿದ್ದಾರೆ.