ಬಾಲಿವುಡ್ ನಟ ವರುಣ್ ಧವನ್ಗೆ ನಿಂದಿಸಿರುವ ಆರೋಪದಡಿ ಅರ್ಚನಾ ಡಾಂಗೇ ಎಂಬುವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಶುಕ್ರವಾರ ರಾತ್ರಿ 9.30 ಕ್ಕೆ ಮುಂಬೈನ ಜುಹುತಾರಾ ರಸ್ತೆಯಲ್ಲಿರುವ ವರುಣ್ ಮನೆ ಎದುರು ಆಗಮಿಸಿದ್ದ ಅರ್ಚನಾ, ಆತನ ಆಗಮನಕ್ಕೆ ಕಾಯುತ್ತಿದ್ದರು. ಮನೆಯಿಂದ ಹೊರ ಬಂದ ವರುಣ್ ಅವರನ್ನು ನೋಡುತ್ತಲೇ ಆತನ ವಿರುದ್ಧ ಬಾಯಿಗೆ ಬಂದ ಹಾಗೆ ಕೆಟ್ಟಪದಗಳಿಂದ ನಿಂದಿಸಿದ್ದಾರೆ. ಮಧ್ಯ ಪ್ರವೇಶಿಸಿದ ವರುಣ್ ಕುಟುಂಬದ ಮೇಲೂ ನಾಲಿಗೆ ಹರಿಬಿಟ್ಟಿದ್ದಾರೆ. ಹೀಗೆ ಮನೆ ಮುಂದೆ ರಂಪಾಟ ನಡೆಸಿರುವ ಅರ್ಚನಾ, ವರುಣ್ ಸ್ನೇಹಿತೆ ನಟಾಶಾ ದಲಾಲ್ ಮೇಲೆ ಹಲ್ಲೆ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆಕೆ, ನಿಮ್ಮ ಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.