ಮುಂಬೈ :ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಭೀತಿಯಿಂದ ಜನರು ಹೊರ ಬರುತ್ತಿದ್ದಂತೆ, ಬಿಗ್ ಬಜೆಟ್ ಸಿನಿಮಾಗಳ ನಿರ್ದೇಶಕರು ತಮ್ಮ ಚಿತ್ರಗಳನ್ನ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಅವುಗಳಲ್ಲಿ ಈ ಚಿತ್ರಗಳೂ ಸೇರಿವೆ..
ನಿನ್ನೆಯಷ್ಟೇ ಬಾಲಿವುಡ್ನ ಹತ್ತು ಹಲವು ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿವೆ. ಅವುಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಹಾಗೂ ಪ್ರಭಾಸ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಒಂದೇ ದಿನದಂದು ಬಿಡುಗಡೆಯಾಗಲಿವೆ. ಈ ಮೂಲಕ ಬಿಗ್ ಸ್ಕ್ರೀನ್ ಮೇಲೆ ಇವರೆಡು ಚಿತ್ರಗಗಳು ಪೈಪೋಟಿ ಮಾಡಲಿವೆ. ಆದರೆ, ಯಾವ ಚಿತ್ರಕ್ಕೆ ಯಾವ ಪ್ರಮಾಣದಲ್ಲಿ ರೆಸ್ಪಾನ್ಸ್ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.