ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ' ಚಪಾಕ್' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೂ 3-4 ದಿನಗಳ ಹಿಂದೆ ಚಿತ್ರದ ಎಲ್ಲೆಡೆ ಅಪಪ್ರಚಾರ ಮಾಡಲಾಗಿತ್ತು. ಆದರೆ ಇವೆಲ್ಲಾ ವಿಘ್ನಗಳ ನಡುವೆಯೂ ಸಿನಿಮಾ ಇಂದು ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ.
ಪಂಜಾಬ್ನಲ್ಲೂ 'ಚಪಾಕ್'ಗೆ ತೆರಿಗೆ ವಿನಾಯಿತಿ...ಜ.11ಕ್ಕೆ ಆ್ಯಸಿಡ್ ಸಂತ್ರಸ್ತೆಯರಿಗೆ ವಿಶೇಷ ಪ್ರದರ್ಶನ - ಪಂಜಾಬ್ನಲ್ಲಿ ಚಪಾಕ್ ಟಿಕೆಟ್ಗೆ ತೆರಿಗೆ ವಿನಾಯಿತಿ
ಪಂಜಾಬ್ನ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯು, ಕ್ಯಾಬಿನೆಟ್ ಸಚಿವೆ ಶ್ರೀಮತಿ ಅರುಣಾ ಚೌಧರಿ ಅವರ ಸೂಚನೆ ಮೇರೆಗೆ ಜನವರಿ 11 ರಂದು ಬೆಳಗ್ಗೆ 11 ಗಂಟೆಗೆ ಆ್ಯಸಿಡ್ ಬಾಧಿತರಿಗೆಂದೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಇನ್ನು ಈ ಸಿನಿಮಾ ಸಾಮಾಜಿಕ ಕಳಕಳಿಯುಳ್ಳ ಸಿನಿಮಾವಾಗಿದ್ದು ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಸಿನಿಮಾ ವೀಕ್ಷಿಸುವವರಿಗೆ ಟಿಕೆಟ್ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದೀಗ ಪಂಜಾಬ್ ಸರ್ಕಾರ ಕೂಡಾ 'ಚಪಾಕ್' ಸಿನಿಮಾ ಟಿಕೆಟ್ಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪಂಜಾಬ್ನ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯು, ಕ್ಯಾಬಿನೆಟ್ ಸಚಿವೆ ಶ್ರೀಮತಿ ಅರುಣಾ ಚೌಧರಿ ಅವರ ಸೂಚನೆ ಮೇರೆಗೆ ಜನವರಿ 11 ರಂದು ಬೆಳಗ್ಗೆ 11 ಗಂಟೆಗೆ ಆ್ಯಸಿಡ್ ಬಾಧಿತರಿಗೆಂದೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಚಂಡೀಗಢದ ಐನಾಕ್ಸ್ ಧಿಲ್ಲೋನ್ ಪ್ಲಾಜಾದಲ್ಲಿ ಈ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಈ ಸ್ಪೆಷಲ್ ಶೋ ಏರ್ಪಡಿಸಲಾಗಿದೆ ಎನ್ನಲಾಗಿದೆ.