ಕರ್ನಾಟಕ

karnataka

ETV Bharat / sitara

ಕಂಗನಾ ನಿವಾಸ ತಲುಪಿದ ‘Y+’ ಲೆವೆಲ್​ ಭದ್ರತಾ ತಂಡ - ಹಿಮಾಚಲ ಪ್ರದೇಶದ ಮನಾಲಿ

ಜೀವ ಬೆದರಿಕೆ ಎದುರಿಸುತ್ತಿರುವ ನಟಿ ಕಂಗನಾ ರನೌತ್​ಗೆ ಕೇಂದ್ರ ಸರ್ಕಾರ ‘Y’ ಪ್ಲಸ್ ಲೆವೆಲ್​ ಭದ್ರತೆ ನೀಡಿದ ಬಳಿಕ ಇಂದು ಪೊಲೀಸರ ತಂಡ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ನಟಿಯ ಮನೆ ತಲುಪಿದೆ.

Kangana's Manali residence
ಕಂಗನಾ ನಿವಾಸ ತಲುಪಿದ ‘Y’ ಲೆವೆಲ್​ ಭದ್ರತಾ ತಂಡ

By

Published : Sep 8, 2020, 4:09 PM IST

ಮನಾಲಿ: ಬಾಲಿವುಡ್ ನಟಿ ಕಂಗನಾ ರನೌತ್​ಗೆ ಕೇಂದ್ರ ಸರ್ಕಾರ ‘Y’ ಪ್ಲಸ್ ಲೆವೆಲ್​ ಭದ್ರತೆ ನೀಡಿದ ಬಳಿಕ ಇಂದು ಪೊಲೀಸರ ತಂಡ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ನಟಿಯ ಮನೆ ತಲುಪಿದೆ.

ಜೀವ ಬೆದರಿಕೆ ಎದುರಿಸುತ್ತಿರುವ ಕಂಗನಾ​ಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರ ಭರವಸೆ ನೀಡಿದ ಬೆನ್ನಲ್ಲೇ ನಿನ್ನೆ ಕೇಂದ್ರ ಸರ್ಕಾರ ‘Y’ ಪ್ಲಸ್​​ ಲೆವೆಲ್​ ಭದ್ರತೆ ನೀಡಲು ಒಪ್ಪಿಗೆ ನೀಡಿತ್ತು.

ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ವಿಚಾರ, ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರನೌತ್​ಗೆ​ ಜೀವ ಬೆದರಿಕೆ ಆರೋಪ ಕೇಳಿ ಬಂದಿತ್ತು. ನಾನು ಮನಾಲಿಯಿಂದ ಮುಂಬೈಗೆ ಹಿಂದಿರುಗದಂತೆ ಶಿವಸೇನೆ ನಾಯಕ ಸಂಜಯ್​ ರಾವತ್​ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಂಗನಾ ಟ್ವೀಟ್​ ಮಾಡಿದ್ದರು.

ನಟಿಯ ತಂದೆಯ ಮನವಿ ಮೇರೆಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸಂಪೂರ್ಣ ಭದ್ರತೆ ಒದಗಿಸುವುದಾಗಿ ತಿಳಿಸಿತ್ತು. ಇನ್ನು ಕೇಂದ್ರ ಸರ್ಕಾರ ಕೂಡ ‘Y’ ಪ್ಲಸ್​​ ಲೆವೆಲ್​ ಭದ್ರತೆ ನೀಡಿದ್ದಕ್ಕೆ ಗೃಹ ಸಚಿವ ಅಮಿತ್​ ಶಾಗೆ ಕಂಗನಾ ಕೃತಜ್ಞತೆ ತಿಳಿಸಿದ್ದರು. ಇದೀಗ ‘Y’ ಪ್ಲಸ್​​ ಲೆವೆಲ್​ ಭದ್ರತೆ ನೀಡಲು ಪೊಲೀಸರ ತಂಡ ಮನಾಲಿಯಲ್ಲಿರುವ ನಟಿಯ ಮನೆ ತಲುಪಿದೆ.

‘Y’ ಪ್ಲಸ್​​ ಲೆವೆಲ್​ ಭದ್ರತೆಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು, ಪೊಲೀಸರು ಸೇರಿದಂತೆ 11 ಸಿಬ್ಬಂದಿ ಬೆದರಿಕೆಗೊಳಗಾದ ವ್ಯಕ್ತಿಗೆ ಭದ್ರತೆ ನೀಡಲಿದ್ದಾರೆ.

ABOUT THE AUTHOR

...view details