ಕರ್ನಾಟಕ

karnataka

ETV Bharat / sitara

ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವಲ್ಲಿ ಭಾರತ ಹಿಂದುಳಿದಿದೆ: ಸೆಲೀನಾ ಜೇಟ್ಲಿ - ರಾಮ್ ಕಮಲ್ ಮುಖರ್ಜಿ ನಿರ್ದೇಶನದ ಸೀಸನ್ಸ್ ಗ್ರೀಟಿಂಗ್ಸ್: ಟ್ರೈಬ್ಯೂಟ್ ಟು ರಿತುಪರ್ಣೋ ಘೋಷ್

ನಟಿ ಸೆಲೀನಾ ಜೇಟ್ಲಿ, ರಾಮ್ ಕಮಲ್ ಮುಖರ್ಜಿ ನಿರ್ದೇಶನದ 'ಸೀಸನ್ಸ್ ಗ್ರೀಟಿಂಗ್ಸ್: ಟ್ರೈಬ್ಯೂಟ್ ಟು ರಿತುಪರ್ಣೋ ಘೋಷ್' ಎಂಬ ಕಿರುಚಿತ್ರದಲ್ಲಿ ಅಭಿನಯfಸಿದ್ದು, ಈ ಚಿತ್ರ ಎಲ್​​ಜಿಬಿಟಿಕ್ಯೂ ಸಮುದಾಯದ ಸಾಮಾಜಿಕ ಸಮಸ್ಯೆಯ ಕುರಿತು ನಿರ್ಮಾಣ ಮಾಡಿರುವ ಚಿತ್ರ ಎಂದಿದ್ದಾರೆ.

Celina Jaitly
ಸೆಲೀನಾ ಜೇಟ್ಲಿ

By

Published : May 2, 2020, 8:26 PM IST

ಮುಂಬೈ:ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಸೆಲೀನಾ ಜೇಟ್ಲಿ ಇತ್ತೀಚೆಗೆ 'ಸೀಸನ್ಸ್ ಗ್ರೀಟಿಂಗ್ಸ್: ಟ್ರೈಬ್ಯೂಟ್ ಟು ರಿತುಪರ್ಣೋ ಘೋಷ್' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಸಾಮಾಜಿಕ ಅಂಗೀಕಾರದ ಸಮಸ್ಯೆಯನ್ನು ತೋರಿಸುವ ಚಿತ್ರಕತೆಯಾಗಿದೆ. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ದಿವಂಗತ ತುಪರ್ಣೋ ಘೋಷ್ ಅವರಿಗೆ ಸಮರ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿದ ಸೆಲೀನಾ, ಒಂದು ಕಡೆ ವಿದ್ಯಾವಂತ ಸಮಾಜ, ವಿಶೇಷವಾಗಿ ಯುವ ಪೀಳಿಗೆ, ಸಮುದಾಯದಲ್ಲಿ ಆಗುತ್ತಿರುವ ಸಾಮಾಜಿಕ ಬದಲಾವಣೆಗಳ ಸ್ವೀಕಾರದತ್ತ ಸಾಗುತ್ತಿದೆ. ಆದರೆ ಸಾಮಾಜಿಕ ಸಹಭಾಗಿತ್ವದ ಬಗೆಗಿನ ಸಂಪೂರ್ಣ ಅಜ್ಞಾನ ದೂರವಾಗದ ಹೊರತು ಸಾಮಾಜಿಕ ಬದಲಾವಣೆಗಳು ಸಂಪೂರ್ಣವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಎಲ್‌ಜಿಬಿಟಿ ಸಮುದಾಯದ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ತಿಳುವಳಿಕೆಯ ಕೊರತೆಯಿದೆ. ಭಾರತದಲ್ಲಿನ ಸಮಾಜವು ಸಲಿಂಗಕಾಮ ಮತ್ತು ಯಾವುದೇ ಮಟ್ಟದಲ್ಲಿ ಅದನ್ನು ಸ್ವೀಕರಿಸುವ ಬಗ್ಗೆ ಶಿಕ್ಷಣ ನೀಡಲು ಸಿದ್ಧವಾಗಿಲ್ಲ. ಕಾಲ ಬದಲಾಗುತ್ತಿದ್ದರೂ ಸಹ ಹೋಮೋಫೋಬಿಯಾ ಮತ್ತು ನಕಾರಾತ್ಮಕತೆ ಇನ್ನೂ ನಮ್ಮ ಸಾಂಸ್ಕೃತಿಕ ನಾರಿನ ಭಾಗವಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ಸ್ವೀಕಾರದ ವಿಷಯದಲ್ಲಿ ಭಾರತವು ಎಲ್ಲಾ ಹಂತಗಳಲ್ಲಿಯೂ ಹಿಂದುಳಿದಿದೆ ಎಂದು ಅವರು ಹೇಳಿದ್ದಾರೆ.

ಈ ಕಿರು ಚಿತ್ರವು ಎಲ್​​ಜಿಬಿಟಿಕ್ಯೂ ಸಮುದಾಯದ ಸಾಮಾಜಿಕ ಸಮಸ್ಯೆಯನ್ನು ಎತ್ತಿ ಹಿಡಿದಿದ್ದು, ರಾಮ್ ಕಮಲ್ ಮುಖರ್ಜಿ ನಿರ್ದೇಶಿಸಿದ್ದಾರೆ. ಶ್ರೀ ಘಟಕ್, ಲಿಲೆಟ್ ದುಬೆ, ಮತ್ತು ಅಜರ್ ಖಾನ್ ಸೇರಿದಂತೆ ಇನ್ನಿತರರು ನಟಿಸಿದ್ದಾರೆ.

2013 ರಿಂದ ಯುಎನ್ ನ ವಿವಿಧ ಕಾರ್ಯಕ್ರಮಗಳ ಮೂಲಕ ಸಮುದಾಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರೀಯರಾಗಿರುವ ಸಲೀನಾ, ಜನರ ಮನೋಭಾವಗಳನ್ನು ಬದಲಾಯಿಸುವುದು ಎಂದಿಗೂ ಸುಲಭವಲ್ಲ. ಆದರೆ ಇದು ಇತರ ವಿಷಯಗಳ ಮೇಲೆ ಪರಿಣಾಮ ಬೀರಲಿದೆ, ಜನರೊಂದಿಗೆ ಉತ್ತಮವಾದ ಸಂಭಾಷಣೆ ನಡೆಸಲು ಹಾಗೂ ಸೂಚನೆಗಳನ್ನು ನೀಡಲು ಸಿನಿಮಾ ಮಾಧ್ಯಮಕ್ಕಿಂತ ಹೆಚ್ಚು ಶಕ್ತಿಶಾಲಿ ಯಾವುದು ಇಲ್ಲ ಎಂದು ನಾನು ನಂಬಿದ್ದೇನೆ ಎಂದು ತಮ್ಮ ಅನುಭವ ವ್ಯಕ್ತಪಡಿಸಿದರು.

ABOUT THE AUTHOR

...view details