ಕಾಶ್ಮೀರದ ಸಮಸ್ಯೆಗೆ ಮೂಲ ಬೇರು ಎಂದು ಹೇಳಲಾಗುತ್ತಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ಕಿತ್ತು ಹಾಕಿದೆ. ಸರ್ಕಾರದ ಈ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತ ಮುದ್ರೆ ಕೂಡ ಒತ್ತಿರುವುದು 370ನೇ ವಿಧಿ ಇತಿಹಾಸದ ಪುಟ ಸೇರಿದೆ. ಸರ್ಕಾರದ ಈ ದಿಟ್ಟ ಕ್ರಮಕ್ಕೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಆರ್ಟಿಕಲ್ 370 ರದ್ದು...ಮೋದಿ ಧೃಡ ನಿರ್ಧಾರಕ್ಕೆ ತಾರೆಯರು ಸಲಾಂ - ಕೇಂದ್ರ ಗೃಹ ಸಚಿವ ಅಮಿತ್ ಶಾ
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಪಡಿಸಿರುವ ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ಮಂದಿ ಬೆಂಬಲ ಸೂಚಿಸಿದ್ದಾರೆ.
ಬಾಲಿವುಡ್ ತಾರೆಯರು 370 ನೇ ವಿಧಿ ರದ್ದತಿಯನ್ನು ಸಂಭ್ರಮದಿಂದ ಸ್ವಾಗತಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ವಿವೇಕ್ ಒಬೆರಾಯ್ 'ಕಾಶ್ಮೀರಕ್ಕಾಗಿ ಹುತಾತ್ಮರಾದ ಸಾಕಷ್ಟು ಭಾರತೀಯ ಯೋಧರಿಗೆ ಇಂದು ಗೌರವ ಸಿಕ್ಕಿದೆ. ಇಂತಹ ಐತಿಹಾಸಿಕ ದಿನ ಸೃಷ್ಟಿಸಿದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ನನ್ನ ಧನ್ಯವಾದಗಳು. ಪ್ರತಿಯೊಬ್ಬ ಭಾರತೀಯನು ಹೃದಯದಿಂದ ದೇಶಭಕ್ತ ಎಂದು ಮೋದಿ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಟಿ ರವೀನಾ ಟಂಡನ್ ಕೂಡ ಭಾರತದ ರಾಷ್ಟ್ರಧ್ವಜಗಳ ಗೊಂಚಲವನ್ನು ಟ್ವಿಟರ್ಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಇತ್ತ ಕನ್ನಡದ ನಟ-ನಿರ್ದೇಶಕ ಪ್ರಥಮ್ ಕೂಡ ಸಂತಸ ವ್ಯಕ್ತಪಡಿಸಿದ್ದು, ಭಾರತ ಈಗ ಸುಭದ್ರ, ಯೋಗ್ಯರು ಆಡಳಿತ ಚುಕ್ಕಣಿ ಹಿಡಿದಾಗ,ಮಹತ್ವದ ಬೆಳವಣಿಗೆ ಆಗೋದು ಸಾಮಾನ್ಯ! ಜಮ್ಮುಕಾಶ್ಮೀರದಲ್ಲಿ ಮೋದಿಯವರ ಧೃಡ ನಿರ್ಧಾರಕ್ಕೆ ಸಲಾಂ. internet ಸಂಪರ್ಕ ಕಟ್ ಮಾಡದೇನೋ ಮಾಡಿದ್ರಿ,ಅದೇ ರೀತಿ ದೇಶದ್ರೋಹಿಗಳನ್ನು Rocket ಉಡಾವಣೆ ಮಾಡಿದಂಗೆ ಉಡಾಯಿಸಿ ಬಿಡಿ, ಪೀಡೆಗಳು ತೊಲಗಲಿ ಎಂದು ಟ್ವೀಟ್ ಮಾಡಿ, ಮೋದಿಗೆ ಶುಭಾಶಯ ತಿಳಿಸಿದ್ದಾರೆ.