ಮುಂಬೈ: ಶೋಲೆ ಚಿತ್ರದ ಕಾಲಿಯಾ ಪಾತ್ರದಲ್ಲಿ ಮಿಂಚಿದ್ದ ಬಾಲಿವುಡ್ ಹಿರಿಯ ನಟ ವಿಜು ಖೋಟೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಬ್ಬರ್ ಜೊತೆಗಾರ ಕಾಲಿಯಾ ಇನ್ನಿಲ್ಲ... ಶೋಲೆ ಚಿತ್ರದ ಫೇಮಸ್ ಪಾತ್ರ ನಿರ್ವಹಿಸಿದ್ರು ವಿಜು ಖೋಟೆ - ಬಾಲಿವುಡ್
ಬಾಲಿವುಡ್ ಹಿರಿಯ ನಟ ಶೋಲೆ ಚಿತ್ರದ ಕಾಲಿಯಾ ಪಾತ್ರದಾರಿ ನಟ ವಿಜು ಖೋಟೆ ಇಹಲೋಕ ತ್ಯಜಿಸಿದ್ದಾರೆ.

ವಿಜು ಖೋಟೆ
1964 ರಲ್ಲಿ ಸಿನಿಮಾರಂಗಕ್ಕೆ ಕಾಲಿರಿಸಿದ್ದ ವಿಜು ಖೋಟೆ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಲೆ ಚಿತ್ರ ಕಾಲಿಯಾ ಪಾತ್ರ ಇವರಿಗೆ ಹೆಚ್ಚು ಖ್ಯಾತಿಯನ್ನ ತಂದುಕೊಟ್ಟಿತ್ತು. ಅದಲ್ಲದೆ ಅಂದಾಜ್ ಅಪ್ನ ಅಪ್ನ ಚಿತ್ರದಲ್ಲಿ ಮೊದಲ ಬಾರಿಗೆ ರೋಬೋ ಪಾತ್ರದಲ್ಲಿ ಮಿಂಚಿದ್ದರು.
77 ವರ್ಷದ ವಿಜು ಖೋಟೆ ಅವರಿಗೆ ನಂದು ಕೋಟೆ ಮತ್ತು ದುರ್ಗ ಖೋಟೆ ಎಂಬ ಇಬ್ಬರು ಮಕ್ಕಳಿದ್ದಾರೆ. ಹಿರಿಯ ನಟನ ಅಗಲಿಕೆಗೆ ಬಾಲಿವುಡ್ ಮಂದಿ ಬೇಸರ ಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ದುಖಃ ವ್ಯಕ್ತಪಡಿಸಿದ್ದಾರೆ.