ಮುಂಬೈ:ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರು ನಕಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಪಡೆದಿದ್ದರು ಎಂಬ ರಿಯಾ ಚಕ್ರವರ್ತಿ ಆರೋಪ ಬಹುಷಃ ಊಹಾಪೋಹವಾಗಿದೆ ಎಂದು ಸಿಬಿಐ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಇಂತಹ ಊಹಾಪೋಹಗಳು ಎಫ್ಐಆರ್ಗೆ ಆಧಾರವಾಗಲಾರವು ಎಂದು ಹೇಳಿದ್ದ ರಜಪೂತ್ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮೀತು ಸಿಂಗ್, ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.