ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಗಾಗಿ ಸಿಬಿಐ ಐದು ತಂಡಗಳನ್ನು ರಚಿಸಿದ್ದು, ಅದರಲ್ಲಿ ಒಂದು ತಂಡ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಬಂದಿದೆ.
ಸುಶಾಂತ್ ಸಿಂಗ್ ಸಾವು ಪ್ರಕರಣ: ಬಾಂದ್ರಾ ಪೊಲೀಸ್ ಠಾಣೆ ತಲುಪಿದ ಸಿಬಿಐ ತಂಡ - ಮುಂಬೈನ ಬಾಂದ್ರಾ ಪೊಲೀಸ್ ಠಾಣೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಬಂದಿದೆ. ಮತ್ತೊಂದು ತಂಡ ಸುಶಾಂತ್ ಸಿಂಗ್ ಅವರ ಬಾಂದ್ರಾ ನಿವಾಸದಲ್ಲಿ ತನಿಖೆ ಆರಂಭಿಸಿದೆ.
![ಸುಶಾಂತ್ ಸಿಂಗ್ ಸಾವು ಪ್ರಕರಣ: ಬಾಂದ್ರಾ ಪೊಲೀಸ್ ಠಾಣೆ ತಲುಪಿದ ಸಿಬಿಐ ತಂಡ sushanth cbi](https://etvbharatimages.akamaized.net/etvbharat/prod-images/768-512-8501927-682-8501927-1597994121031.jpg)
sushanth cbi
ಸುಶಾಂತ್ ಅವರ ಮರಣೋತ್ತರ ವರದಿ ಮತ್ತು ಇತರ ಮಾಹಿತಿಯನ್ನು ಪಡೆಯಲು ಸಿಬಿಐ ತಂಡ ಮುಂಬೈ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದೆ.
ಸಿಬಿಐನ ಮತ್ತೊಂದು ತಂಡ ಸುಶಾಂತ್ ಸಿಂಗ್ ಅವರ ಬಾಂದ್ರಾ ನಿವಾಸದಲ್ಲಿ ತನಿಖೆ ಆರಂಭಿಸಿದೆ.