ಕರ್ನಾಟಕ

karnataka

ETV Bharat / sitara

‘ದಿ ಲಂಚ್​ ಬಾಕ್ಸ್​’ ನಿರ್ದೇಶಕಿ ಸೆಹಲ್ ಅಲಿ ಲತೀಫ್ ವಿಧಿವಶ - ನಿರ್ದೇಶಕಿ ಸೆಹಲ್ ಅಲಿ ಲತೀಫ್ ನಿಧನ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಿನಿಮಾ ನಿರ್ದೇಶಕಿ ಸೆಹಲ್ ಅಲಿ ಲತೀಫ್, ಎಂಟು ದಿನಗಳ ಹಿಂದೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿದ್ದರು. ಆದರೆ, ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಸೆಹಲ್ ಅಲಿ ಲತೀಫ್
seher aly latif

By

Published : Jun 8, 2021, 12:50 PM IST

ಮುಂಬೈ: 'ದಿ ಲಂಚ್ ಬಾಕ್ಸ್​' ಮತ್ತು 'ದುರ್ಗಮತಿ' ಚಿತ್ರಗಳನ್ನು ನಿರ್ದೇಶಿಸಿದ್ದ ಹೆಸರಾಂತ ಸಿನಿಮಾ ನಿರ್ದೇಶಕಿ ಸೆಹಲ್ ಅಲಿ ಲತೀಫ್ ತೀವ್ರ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಸ್ನೇಹಿತ ನೀರಜ್ ಉದ್ವಾನಿ ತಿಳಿಸಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಲತೀಫ್, ಎಂಟು ದಿನಗಳ ಹಿಂದೆ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿದ್ದರು. ಆದರೆ, ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನಚರಿತ್ರೆ 'ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಸಿನಿಮಾ ನಿರ್ದೇಶಿಸಿದ್ದ ಲತೀಫ್ ಸಿನಿಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಝೀರೋ ಡಾರ್ಕ್ ಥರ್ಟಿ, ಜೂಲಿಯಾ ರಾಬರ್ಟ್ ಅಭಿನಯದ ಈಟ್​​ ಪ್ರೇ ಲವ್​, ನೆಟ್​ಫ್ಲಿಕ್ಸ್ ಸರಣಿಯಾದ ಸೆನ್ಸ್​​ 8 ಸೇರಿ ಬಹುತೇಕ ಅತ್ಯುತ್ತಮ ಸರಣಿಗಳನ್ನು ಇವರು ನಿರ್ದೇಶಿಸಿದ್ದರು.

ಇದನ್ನೂ ಓದಿ:ವೈದ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ಅವರ ಮೇಲೆ ಹಲ್ಲೆ ಮಾಡದಿರಿ: ನಟ ಕಿರಣ್ ರಾಜ್

ವಿದ್ಯಾಬಾಲನ್ ಅಭಿನಯದ 'ಶಕುಂತಲಾ ದೇವಿ' ಮತ್ತು ಅಕ್ಷಯ್ ಕುಮಾರ್ ಅವರ 'ಗೋಲ್ಡ್‌' ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಲತೀಫ್ ಅಗಲಿಕೆಗೆ ಸಿನಿರಂಗ ಸೇರಿ ಅವರ ಅಭಿಮಾನಿ ಬಳಗ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details