ಮುಂಬೈ(ಮಹಾರಾಷ್ಟ್ರ) :ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ(Bollywood actor Ananya Panday) ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ನೋಟಿಸ್ ಪಡೆದ ಬಳಿಕ ಸಾಮಾಜಿಕ ಜಾಲತಾಣದಿಂದ ಸ್ವಲ್ಪ ವಿಮುಖರಾಗಿದ್ದರು.
ಇದೀಗ ಬಾನಿನಲ್ಲಿ ಮೂಡಿದ ಕಾಮನಿಬಿಲ್ಲನ್ನು ಸೆರೆ ಹಿಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ(shared a beautiful post on her Instagram) ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.
ಸೋದರ ಸಂಬಂಧಿ ಅಲನ್ನಾ ಪಾಂಡೆಗೆ ಅಭಿನಂದನೆ ಕಾರಿನಲ್ಲಿ ಕುಳಿತಿರುವ ಅನನ್ಯಾ ಪಾಂಡೆ, ಕಾರಿನ ಗಾಜಿನಾಚೆಗೆ ಕಾಣುವ ತಿಳಿನೀಲಿ ಆಕಾಶದಲ್ಲಿ ಕಾಮನಬಿಲ್ಲು ಮೂಡಿರುವ ಸುಂದರವಾದ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ, 'ಮಳೆ ಬೀಳದೇ ಕಾಮನಬಿಲ್ಲು ಮೂಡಲು ಸಾಧ್ಯವೇ' ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.
ಇದಲ್ಲದೇ, ತನ್ನ ಸೋದರ ಸಂಬಂಧಿ ಅಲನ್ನಾ ಪಾಂಡೆ, ಗೆಳೆಯ ಐವರ್ ಮೆಕ್ಕ್ರೇ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲು ಅಲನ್ನಾ ಕೈಬೆರಳಲ್ಲಿ ಉಂಗುರ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ನ ಸ್ಟೇಟಸ್ನಲ್ಲಿ ಹಾಕಿ@ಅಲನ್ನಾಪಾಂಡೆ@ಸೋ ಮಚ್ ಲವ್ ಎಂದು ಬರೆದುಕೊಂಡಿದ್ದಾರೆ.
ಅನನ್ಯಾ ಪಾಂಡೆ ತೆಲುಗು ನಟ ವಿಜಯ್ ದೇವರಕೊಂಡ ನಾಯಕರಾಗಿರುವ ಲಿಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಕೂಡ ಕಾಣಿಸಿಕೊಂಡಿದ್ದಾರೆ.